ಮದ್ಯ ಪ್ರಿಯರೇ... ಭಾರತದ ನಂ. 1 ಬಿಯರ್ ಬ್ರ್ಯಾಂಡ್ ಯಾವುದು ಗೊತ್ತಾ? ಇಷ್ಟಪಟ್ಟು ಕುಡಿಯುವವರಿಗೂ ಇದರ ಬಗ್ಗೆ ಗೊತ್ತಿರಲ್ಲ

Sat, 30 Nov 2024-4:55 pm,

ಭಾರತದಲ್ಲಿ ಮದ್ಯ ಪ್ರಿಯರಿಗೇನು ಕೊರತೆ ಇಲ್ಲ. ವಿಸ್ಕಿ, ರಮ್, ಸ್ಕಾಚ್, ವೋಡ್ಕಾ ಹೀಗೆ ಅನೇಕ ವಿಧದ ಮದ್ಯಗಳು ಲಭ್ಯವಿದೆ. ಆದರೆ ಬೇಸಿಗೆ ಸಂದರ್ಭದಲ್ಲಿ ಹೆಚ್ಚಾಗಿ ಜನರು ಬಿಯರ್‌ ಕುಡಿಯರು ಇಷ್ಟಪಡುತ್ತಾರೆ. ಅಂದಹಾಗೆ ಭಾರತ ಸೇರಿದಂತೆ ಇಡೀ ಪ್ರಪಂಚಲ್ಲಿ ಫೇಮಸ್‌ ಆಗಿರುವ ಬಿಯರ್‌ ಬ್ರಾಂಡ್‌ ಯಾವುದೆಂದು ನಿಮಗೆ ತಿಳಿದಿದೆಯೇ?

ಕಿಂಗ್‌ಫಿಶರ್ ಅನ್ನು ಯುನೈಟೆಡ್ ಬ್ರೂವರೀಸ್ ಗ್ರೂಪ್ ತಯಾರಿಸಿದೆ. ಭಾರತದಲ್ಲಿ ಇದನ್ನು ಇಷ್ಟಪಡುವವರು ಬಹಳ ಜನ ಇದ್ದಾರೆ. 1978 ರಲ್ಲಿ ಬಿಡುಗಡೆಯಾದ ಕಿಂಗ್‌ಫಿಶರ್ ಬಿಯರ್ ಈಗ ಭಾರತವನ್ನು ಹೊರತುಪಡಿಸಿ 60 ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿದೆ. ಟ್ರಸ್ಟ್ ರಿಸರ್ಚ್ ಅಡ್ವೈಸರಿ ನಡೆಸಿದ 2012 ರ ಬ್ರ್ಯಾಂಡ್ ಟ್ರಸ್ಟ್ ವರದಿಯ ಪ್ರಕಾರ, ಇದು ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್‌ಗಳಲ್ಲಿ 74 ನೇ ಸ್ಥಾನದಲ್ಲಿದೆ.

ಕಾರ್ಲ್ಸ್‌ಬರ್ಗ್ ಗ್ರೂಪ್ ಅನ್ನು ಬ್ರೂವರ್ ಜೆಸ್ಸಿ ಜಾಕೋಬ್‌ಸೆನ್ 1847 ರಲ್ಲಿ ಸ್ಥಾಪಿಸಿದರು. ಜೆಸ್ಸಿ ತನ್ನ ಮಗನಾದ ಕಾರ್ಲ್ ಜಾಕೋಬ್ಸೆನ್ ಹೆಸರನ್ನೇ ಈ ಬ್ರಾಂಡ್‌ಗೆ ಇಟ್ಟಿದ್ದನು. ಈ ಕಂಪನಿಯು 1970 ರಲ್ಲಿ ಟ್ಯೂಬೋರ್ಗ್‌ನೊಂದಿಗೆ ವಿಲೀನಗೊಂಡಿತು.

 

ಬಡ್ವೈಸರ್ ಮ್ಯಾಗ್ನಮ್ ಅದರ ನಯವಾದ ಸುವಾಸನೆ ಮತ್ತು ವಿಶೇಷ ವಿನ್ಯಾಸದಿಂದಾಗಿ ಪ್ರಸಿದ್ಧವಾಗಿದೆ.

 

ಹೈನೆಕೆನ್ (Heineken) ಬಿಯರ್ ಅನ್ನು ಭಾರತದಲ್ಲಿ ತಯಾರಿಸಲಾಗಿಲ್ಲ. ಇದು ನೇರವಾಗಿ ಹಾಲೆಂಡ್‌ನಿಂದ ಬರುತ್ತದೆ. ಇದನ್ನು ವಿಶಿಷ್ಟವಾದ ಯೀಸ್ಟ್ ಮತ್ತು ಹಣ್ಣಿನಿಂದ ತಯಾರಿಸಲಾಗುತ್ತದೆ. ಹೈನೆಕೆನ್ ವಿಶ್ವದ ಎರಡನೇ ಅತಿ ದೊಡ್ಡ ಮದ್ಯ ತಯಾರಿಕಾ ಕಂಪನಿಯಾಗಿದೆ. 2012 ರಲ್ಲಿ, ಹೈನೆಕೆನ್ ಟಕಿಲಾ-ಫ್ಲೇವರ್ಡ್ ಬಿಯರ್ ಡೆಸ್ಪೆರಾಡೋಸ್ ಅನ್ನು ಸ್ವಾಧೀನಪಡಿಸಿಕೊಂಡಿತು.

 

ಟ್ಯೂಬೋರ್ಗ್ ಅನ್ನು 1873 ರಲ್ಲಿ ಸ್ಥಾಪಿಸಲಾಯಿತು. ಟ್ಯೂಬೋರ್ಗ್ ಗ್ರೀನ್ ಬಿಯರ್ ವಿಶ್ವದ ಅತ್ಯಂತ ಗುರುತಿಸಲ್ಪಟ್ಟ ಬಿಯರ್ ಬ್ರಾಂಡ್‌ಗಳಲ್ಲಿ ಒಂದಾಗಿದೆ.

 

ಸೂಚನೆ: ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಈ ವರದಿಯಲ್ಲಿ ಮದ್ಯಪಾನ ಉತ್ತೇಜಿಸುವುದಿಲ್ಲ. ಕೇವಲ ಮಾಹಿತಿ ನೀಡುವುದಷ್ಟೇ ಉದ್ದೇಶ. ಜೀ ಕನ್ನಡ ನ್ಯೂಸ್‌ ಇದರ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link