ಬಿಗ್ ಬಾಸ್ ಬ್ಯೂಟಿ ಅನುಷಾ ರೈ ನಿಜವಾದ ವಯಸ್ಸೆಷ್ಟು ಗೊತ್ತಾ? ಈಕೆ ಓದಿರೋ ಸ್ಕೂಲ್ ಯಾವುದು?
ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿ ಅನುಷಾ ರೈ ಸಖತ್ ಆಕ್ಟೀವ್ ಆಗಿ ಆಡುತ್ತಿದ್ದಾರೆ. ನೋಡೋದಕ್ಕೆ ಸಖತ್ ಸಾಫ್ಟ್ ಆಗಿದ್ದರೂ, ಖಾರವಾಗಿರುವ ಅನುಷಾ ಟಾಸ್ಕ್ ಅಂತಾ ಬಂದಾಗ ಕೊಂಚವೂ ಹಿಂಜರಿಯಲ್ಲ. ಅಷ್ಟೇ ಅಲ್ಲದೆ ಮಾತಿನಲ್ಲೂ ಯಾರಿಗೂ ಕಡಿಮೆ ಇಲ್ಲ ಎನ್ನುವಂತಿದ್ದಾರೆ.
ಇನ್ನು ಈ ಬ್ಯೂಟಿ ಓದಿರುವ ಸ್ಕೂಲ್ ಯಾವುದು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.
ಅನುಷಾ ರೈ ಅವರು 1 ರಿಂದ ನಾಲ್ಕನೇ ತರಗತಿವರೆಗೆ ಬೆಂಗಳೂರಿನ ಶಾಲೆವೊಂದರಲ್ಲಿ ಓದಿದ್ದರು. ಅದಾದ ನಂತರ 5ರಿಂದ 10 ನೇ ತರಗತಿವರೆಗೆ ಕನ್ನಡ ಮೀಡಿಯಂ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆಎನ್ನಲಾಗಿದೆ.
ಇನ್ನು ಅನುಷಾ ಹುಟ್ಟಿ ಬೆಳೆದಿರುವುದು ತುಮಕೂರಿನಲ್ಲೇ. ಬೆಂಗಳೂರಿನ ಆಚಾರ್ಯ ಇನ್ಸಿಟ್ಯೂಟ್ ಆಫ್ ಟೆಕ್ನಾಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
2016ರಲ್ಲಿ 'ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ' ಕಿರೀಟ ಮುಡಿಗೇರಿಸಿಕೊಂಡು ಅನುಷಾ, ಅದಾದ ನಂತರ ಅಣ್ಣಯ್ಯ, ಸರಯೂ, ರಾಜಕುಮಾರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣಹಚ್ಚಿದ್ದಾರೆ.
ಇನ್ನು `ಮಹಾನುಭಾವರು' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಅನುಷಾ, ಆ ಬಳಿಕ ಗೋಸಿ ಗ್ಯಾಂಗ್, ಬಿಎಂಡಬ್ಲ್ಯೂ, ದಮಯಂತಿ, ರೈಡರ್, ಖಡಕ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಅನುಷಾಗೆ ಈಗ 27 ವರ್ಷ ವಯಸ್ಸು. ಹನುಮಂತ ರಾಜ್ ಮತ್ತು ಭಾಗ್ಯ ದಂಪತಿ ಪುತ್ರಿಯಾಗಿರರುವ ಅನುಷಾ ಮೂಲತಃ ತುಮಕೂರಿನವರು.