ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಅಂದರೆ 5 ಸಲ ಟ್ರೋಫಿ ಗೆದ್ದಿದ್ದು ಕೇವಲ ಒಂದೇ ತಂಡ: ಯಾವುದದು ಗೊತ್ತಾ?
ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಯಾವ ತಂಡ ಅತೀ ಹೆಚ್ಚು ಬಾರಿ ವಿಶ್ವಕಪ್ ಟ್ರೋಫಿ ಗೆದ್ದಿದೆ ಎಂಬುದರ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ. ಮೊದಲ ಬಾರಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಆಡುತ್ತಿದ್ದು, 12 ವರ್ಷಗಳ ಬಳಿಕ ಭಾರತ ಟ್ರೋಫಿ ಎತ್ತಿಹಿಡಿಯಲು ಸರ್ವಪ್ರಯತ್ನ ಮಾಡುತ್ತಿದೆ.
ಇನ್ನು ಮೊದಲ ವಿಶ್ವಕಪ್ 1975 ರಲ್ಲಿ ಇಂಗ್ಲೆಂಡ್’ನಲ್ಲಿ ನಡೆದಿತ್ತು. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಗೆದ್ದಿತ್ತು. ಆದರೆ 48 ವರ್ಷಗಳ ನಂತರ ಅಂದರೆ ಈ ಬಾರಿ ವೆಸ್ಟ್ ಇಂಡೀಸ್ ವಿಶ್ವಕಪ್’ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ.
ಐಸಿಸಿ ವಿಶ್ವಕಪ್ ಇತಿಹಾಸವನ್ನು ನೋಡುವುದಾದರೆ, 1975 ರಿಂದ 2019 ರವರೆಗಿನ ವಿಶ್ವಕಪ್ ಟ್ರೋಫಿಯನ್ನು ಗೆದ್ದ ದೇಶಗಳ ಹೆಸರನ್ನು ಇಸವಿ ಸಮೇತ ಇಲ್ಲಿ ನೀಡಲಾಗಿದೆ.
1975 ವೆಸ್ಟ್ ಇಂಡೀಸ್, 1979- ವೆಸ್ಟ್ ಇಂಡೀಸ್, 1983- ಭಾರತ, 1987- ಆಸ್ಟ್ರೇಲಿಯಾ, 1992- ಪಾಕಿಸ್ತಾನ, 1996- ಶ್ರೀಲಂಕಾ, 1999- ಆಸ್ಟ್ರೇಲಿಯಾ, 2003-ಆಸ್ಟ್ರೇಲಿಯಾ, 2007- ಆಸ್ಟ್ರೇಲಿಯಾ, 2011- ಭಾರತ, 2015- ಆಸ್ಟ್ರೇಲಿಯಾ, 2019- ಇಂಗ್ಲೆಂಡ್,
ಈ ಮಾಹಿತಿಯನ್ನು ನೋಡಿದ ಬಳಿಕ ನಿಮಗೆ ಈಗಾಗಲೇ ತಿಳಿದಿರಬಹುದು. ಆಸ್ಟ್ರೇಲಿಯಾ ಅತಿ ಹೆಚ್ಚು ಬಾರಿ ವಿಶ್ವಕಪ್ ಟ್ರೋಫಿ ಗೆದ್ದಿದೆ ಎಂದು. ಭಾರತ ಎರಡು ಬಾರಿ ವಿಶ್ವಕಪ್ ಗೆದ್ದಿದೆ. ಮೊದಲ ಬಾರಿಗೆ 1983 ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಮತ್ತು 2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ.
ಆಸ್ಟ್ರೇಲಿಯಾ 5 ಬಾರಿ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದು ಮಾತ್ರವಲ್ಲ, ಎರಡು ಬಾರಿ ರನ್ನರ್ ಅಪ್ ಕೂಡ ಆಗಿದೆ.