White Fungus Abscess: Corona ದಿಂದ ಚೇತರಿಸಿಕೊಂಡ ರೋಗಿಯ Brain ನಲ್ಲಿ White Fungus ಬಾವು, ಬೆಚ್ಚಿ ಬಿದ್ದ ವಿಜ್ಞಾನಿಗಳು
1. ರೋಗಿಯ ಮೆದುಳಿನಲ್ಲಿ ಹುಣ್ಣು - ಈ ಕುರಿತು ಮಾತನಾಡಿರುವ ಹೈದರಾಬಾದಿನ ಸನ್ಶೈನ್ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸಕ ಡಾ.ಪಿ.ರಂಗನಾಥಂ, ' ರೋಗಿಯು ಕಳೆದ ಮೇ ತಿಂಗಳಲ್ಲಿ ಕರೋನಾ ಸೋಂಕಿಗೆ (Corona Infection) ಒಳಗಾಗಿದ್ದರು. ಅನಾರೋಗ್ಯದ ಸಮಯದಲ್ಲಿ ಅವರಿಗೆ ತೀವ್ರವಾದ ಶ್ವಾಸಕೋಶದ ಸೋಂಕು ಇತ್ತು ಮತ್ತು ಅವರಿಂದ ಮಾತನಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
2. ಶಸ್ತ್ರಚಿಕಿತ್ಸೆಯ ಮೂಲಕ ಪ್ರಾಣ ಉಳಿಸಿದ ವೈದ್ಯರು - 'ಬಳಿಕ ರೋಗಿಯ ದೇಹವನ್ನು ಸ್ಕ್ಯಾನ್ ಮಾಡಲಾಯಿತು, ಇದರಲ್ಲಿ ರೋಗಿಯ ಮೆದುಳಿನಲ್ಲಿ ಹೆಪ್ಪುಗಟ್ಟುವಿಕೆಯಂತಹ ಸಂರಚನೆಗಳು ರೂಪುಗೊಳ್ಳುತ್ತಿರುವುದು ಕಂಡುಬಂದಿದೆ. ನಿರಂತರ ಚಿಕಿತ್ಸೆಯ ಹೊರತಾಗಿಯೂ ಈ ಹೆಪ್ಪುಗಟ್ಟುವಿಕೆ ರಚನೆಗಳು ಕರಗಿಲ್ಲ. ಹಾಗಾಗಿ ನಾವು ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು. ನಂತರ ಬಿಳಿ ಶಿಲೀಂಧ್ರವು ಬಾವು ರೂಪುಗೊಂಡಿದೆ ಎಂದು ನಮಗೆ ತಿಳಿದು ಬಂತು. ಸಾಮಾನ್ಯವಾಗಿ ಇದು ತುಂಬಾ ಅಪರೂಪದ ಕಾಯಿಲೆ ಎಂದು ಭಾವಿಸಲಾಗುತ್ತದೆ.
3. ಸಕ್ಕರೆ ಕಾಯಿಲೆ ಇರುವವರಲ್ಲಿ ಹೆಚ್ಚು ಅಪಾಯ - ಮಾಧ್ಯಮ ವರದಿಗಳ ಪ್ರಕಾರ 'ಇದು ವಿರಳಾತಿವಿರಳ ಪ್ರಕರಣಗಳಲ್ಲಿ ಒಂದಾಗಿದ್ದು, ಭಾರತದಲ್ಲಿ ಇಂತಹ ಪ್ರಕರಣಗಳೆ ಪತ್ತೆಯಾಗಿಲ್ಲ ಎಂದರೆ ತಪ್ಪಾಗಲಾರದು. ಆದರೆ, ಇದೊಂದು ಯುನಿಕ್ ಪ್ರಕರಣವಾಗಿದೆ. ಸಾಮಾನ್ಯವಾಗಿ ಫಂಗಲ್ ಇನ್ಫೆಕ್ಷನ್ ಶುಗರ್ ಇರುವ ರೋಗಿಗಳಲ್ಲಿ ಅಥವಾ ದುರ್ಬಲ ರೋಗನಿರೋಧಕ ಸಿಸ್ಟಂ ಇರುವ ರೋಗಿಗಳಲ್ಲಿ ಕಂಡುಬರುತ್ತದೆ. ಆದರೆ, 60 ವರ್ಷ ವಯಸ್ಸಿನ ಈ ರೋಗಿಯಲ್ಲಿ ಸಕ್ಕರೆ ಕಾಯಿಲೆ ಕೂಡ ಇರಲಿಲ್ಲ. ಹೀಗಾಗಿ ಇದೊಂದು ಚಿಂತೆ ಹೆಚ್ಚಿಸುವ ಪ್ರಕರಣವಾಗಿದೆ ಎಂದು ಡಾ. ರಂಗನಾಥ್ ಹೇಳಿದ್ದಾರೆ' ಎನ್ನಲಾಗಿದೆ.
4. ಇದೊಂದು ಚಿಂತೆ ಹೆಚ್ಚಿಸುವ ಪ್ರಕರಣ ಎಂದ ವಿಜ್ಞಾನಿಗಳು - ಭಾರತದಲ್ಲಿ ಕರೋನಾ ಸೋಂಕಿನ ಎರಡನೇ ಅಲೆಯ ನಂತರ, ಕಪ್ಪು ಶಿಲೀಂಧ್ರದ (Black Fungus) ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ವಿಶೇಷವಾಗಿ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ, ರೋಗಿಗಳ ಸಂಖ್ಯೆ ತುಂಬಾ ಹೆಚ್ಚಿತ್ತು. ಆದರೆ, ಇದರ ನಂತರ ವೈರಸ್‌ನ ಹಲವು ರೂಪಾಂತರಗಳು ಸಹ ಕಾಣಿಸಿಕೊಂಡವು. ಪ್ರಸ್ತುತ ರೋಗಿಯ ಮೆದುಳಿನಲ್ಲಿ ವೈಟ್ ಫಂಗಸ್ (White Fungus) ಹುಣ್ಣುಗಳು ಕಾಣಿಸಿಕೊಂಡ ಕಾರಣ ಇದೀಗ ವಿಜ್ಞಾನಿಗಳು ಕೂಡ ಬೆಚ್ಚಿಬಿದ್ದಿದ್ದಾರೆ.
5. ಅಪಾಯ ಇನ್ನೂ ಮುಗಿದಿಲ್ಲ - ಈ ಕುರಿತು ಹೇಳಿಕೆ ನೀಡಿರುವ ವೈದ್ಯರು, ಕೊರೊನಾ ವೈರಸ್ ನ ಎರಡನೆಯ ಅಲೆಯ ಪ್ರಭಾವ ಕಡಿಮೆಯಾಗುತ್ತಿದ್ದಂತೆ, ಅದಕ್ಕೆ ಸಂಬಂಧಿಸಿದ ಬ್ಲಾಕ್ ಫಂಗಸ್ ಹಾಗೂ ವೈಟ್ ಫಂಗಸ್ ಪ್ರಕರಣಗಳ ಸಂಖ್ಯೆಯಲ್ಲಿಯೂ ಕೂಡ ಗಣನೀಯ ಇಳಿಕೆಯಾಗಿದೆ. ಆದರೆ, ಅಪಾಯ ಇನ್ನೂ ಕಡಿಮೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಕೋರೋನಾ ಹೊಸ ಹೊಸ ರೂಪದಲ್ಲಿ ಜನರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಹೀಗಾಗಿ ಕೊರೊನಾ ಪ್ರೋಟೋಕಾಲ್ ಗಳನ್ನು ಜನರು ಚಾಚುತಪ್ಪದೆ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.