ಕೂದಲಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಈ ಎರಡು ಪದಾರ್ಥಗಳ ಹೇರ್ ಮಾಸ್ಕ್!
ಕೂದಲು ಉದುರುವುದು ಬಹುತೇಕ ಜನರ ಪ್ರಮುಖ ಸಮಸ್ಯೆಯಾಗಿದ್ದು.. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಕೂದಲು ಉದುರುವ ಸಮಸ್ಯೆ ಕಂಡುಬರುತ್ತಿದೆ.. ಚಿಕ್ಕ ವಯಸ್ಸಿನಲ್ಲೇ ಬೋಳು ತಲೆ ಮತ್ತು ಕೂದಲು ಉದುರುವುದು ದೊಡ್ಡ ಮಾನಸಿಕ ಯಾತನೆ ಉಂಟುಮಾಡಬಹುದು.
ತೆಂಗಿನ ಎಣ್ಣೆ ಹೇರ್ ಮಾಸ್ಕ್: ಕೂದಲು ಉದುರುವಿಕೆಯ ವಿರುದ್ಧ ಹೋರಾಡಲು ತೆಂಗಿನ ಎಣ್ಣೆ ಉತ್ತಮ ಪರಿಹಾರವಾಗಿದೆ.. ಈ ಎಣ್ಣೆಗೆ ಆಲೀವ್ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ ನಿಮ್ಮ ಕೂದಲಿಗೆ ಹಚ್ಚಿ ಮೂರು ತಾಸು ಬಿಟ್ಟು ತೊಳೆಯಿರಿ.. ಇದರಿಂದ ಕೂದಲು ದಷ್ಟಪುಷ್ಟವಾಗಿ ಬೆಳೆಯುವುದಲ್ಲದೇ ಕೂದಲಿನ ಎಲ್ಲ ಸಮಸ್ಯೆಗೆ ಮುಕ್ತಿ ನೀಡಬಹುದು.
ಮೊಟ್ಟೆಯ ಹಳದಿ ಲೋಳೆ ಮಾಸ್ಕ್: ಇದು ತುಂಬಾ ಸಾಮಾನ್ಯ ಮತ್ತು ಬಳಸಲು ಸುಲಭವಾದ ಹೇರ್ ಮಾಸ್ಕ್ ಆಗಿದೆ. ಇದನ್ನು ಒಣ ಕೂದಲಿಗೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ, ಕನಿಷ್ಠ 30-40 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ.
ಆಲೋವೆರಾ ಜೆಲ್ ಹೇರ್ ಮಾಸ್ಕ್: ಆಲೋವೆರಾ ಜೆಲ್‌ನ್ನು ನಿಮ್ಮ ಕೂದಲಿಗೆ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆಯಿರಿ.. ಇದರಿಂದ ನಿಮ್ಮ ಕೂದಲು ನೈಸರ್ಗಿಕ ಹೊಳಪನ್ನು ಪಡೆದುಕೊಳ್ಳುತ್ತವೆ..
(ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)