ಹೇರ್ ಡೈ ಬೇಡವೇ ಬೇಡ… ಈ ತರಕಾರಿಗಳ ಪೇಸ್ಟ್ ಹಚ್ಚಿದರೆ ಬಿಳಿಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುತ್ತೆ!
ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಕ್ರಮ ಮತ್ತು ಕೆಟ್ಟ ಜೀವನಶೈಲಿಯಿಂದ ಕೂದಲಿನ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಇಂದು ನಾವು ಕೆಲವೊಂದು ಮನೆಮದ್ದುಗಳನ್ನು ನಿಮಗೆ ತಿಳಿಸಲಿದ್ದು, ಅವುಗಳು ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುವ ಶಕ್ತಿ ಹೊಂದಿದೆ.
1. ಹರಿವೆ ಸೊಪ್ಪು: ಬಿಳಿ ಕೂದಲನ್ನು ತೊಡೆದುಹಾಕಲು ಬಯಸುವವರಿಗೆ ಹರಿವೆ ಸೊಪ್ಪು ಉತ್ತಮ ಆಯ್ಕೆ. ಒಂದು ಬೌಲ್ ಹರಿವೆ ಸೊಪ್ಪುಗಳನ್ನು ಪುಡಿಮಾಡಿ ಕೂದಲಿಗೆ ಹಚ್ಚಿ ಕನಿಷ್ಠ ಒಂದು ಗಂಟೆ ಈ ರೀತಿ ಬಿಡಿ. ಇದು ನಿಮ್ಮ ಕೂದಲಿಗೆ ಅದ್ಭುತವಾದ ಬಣ್ಣವನ್ನು ನೀಡುತ್ತದೆ.
2. ನೆಲ್ಲಿಕಾಯಿ: ನೆಲ್ಲಿಕಾಯಿಯನ್ನು ಕೂದಲಿಗೆ ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ. ಒಂದು ಬಟ್ಟಲಿನಲ್ಲಿ 2 ರಿಂದ 3 ನೆಲ್ಲಿಕಾಯಿಯನ್ನು ಪುಡಿ ಮಾಡಿ, ಅದರ ತಿರುಳನ್ನು ಹೊರತೆಗೆಯಬೇಕು. ಇದರ ನಂತರ, ಒಂದು ಚಮಚ ಬಾದಾಮಿ ಎಣ್ಣೆ ಮತ್ತು ಜೇನುತುಪ್ಪವನ್ನು ಬೆರೆಸಿ ಕೂದಲಿಗೆ ಹಚ್ಚಿ. ಅರ್ಧ ಘಂಟೆಯವರೆಗೆ ಬಿಡಿ. ಈ ಬಳಿಕ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ಮಾಡಿದರೆ, ನಿಮ್ಮ ಕೂದಲು ಕಪ್ಪಾಗುತ್ತದೆ.
3. ಈರುಳ್ಳಿ: ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಈರುಳ್ಳಿ ಕೂಡ ವರದಾನವೆಂದೇ ಹೇಳಬಹುದು. ಎರಡು ಚಮಚ ಈರುಳ್ಳಿ ಮತ್ತು ನಿಂಬೆ ರಸವನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ ಮತ್ತು ಕನಿಷ್ಠ 30 ನಿಮಿಷಗಳ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಹೀಗೆ ವಾರಕ್ಕೆ 2-3 ಬಾರಿ ಹಚ್ಚಿದರೆ ಕೂದಲಿನ ಬಿಳುಪು ದೂರವಾಗುತ್ತದೆ.
4. ಕಪ್ಪು ಚಹಾ: ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಬ್ಲ್ಯಾಕ್ ಟೀ ಕೂಡ ಉತ್ತಮ ಆಯ್ಕೆಯಾಗಿದೆ. ಎರಡು ಲೋಟ ನೀರನ್ನು ಕುದಿಸಿ, ಅದಕ್ಕೆ 3 ರಿಂದ 4 ಟೀ ಚಮಚ ಕಪ್ಪು ಚಹಾವನ್ನು ಸೇರಿಸಿ, ಒಂದು ಚಮಚ ಉಪ್ಪನ್ನು ಸಹ ಸೇರಿಸಿ. ಎಲ್ಲವನ್ನೂ ಕುದಿಸಿ, ಫಿಲ್ಟರ್ ಮಾಡಿ ಮತ್ತು ನಿಮ್ಮ ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಬಿಡಿ ಮತ್ತು ನಂತರ ಕೂದಲನ್ನು ತೊಳೆಯಿರಿ. ಇದು ನಿಮ್ಮ ಕೂದಲು ಕಪ್ಪಾಗಿರುವಂತೆ ಮಾಡುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)