White Hair : ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಈ ಮನೆಮದ್ದುಗಳನ್ನು ಬಳಸಿ!
ಕಾಫಿ ಪುಡಿ ಸಹ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಕಾಫಿ ಪುಡಿಯನ್ನು ಅಲೋವೆರ ಜೊತೆಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ಕ್ರಮೇಣ ಕಪ್ಪಾಗುತ್ತದೆ.
ವಾರಕ್ಕೆ ಎರಡು ಬಾರಿ ಕೂದಲಿಗೆ ಆಲೋವೆರಾ ಜೆಲ್ ಹಚ್ಚಬೇಕು. ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಅನ್ವಯಿಸಿ. ನಂತರ ವಾಶ್ ನಾಡಿ.
ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ರುಬ್ಬಿ. ಬಳಿಕ ಎರಡು-ಮೂರು ಚಮಚ ಆಮ್ಲಾ ಪೌಡರ್ ಮತ್ತು ಬ್ರಾಹ್ಮಿ ಪುಡಿಯನ್ನು ಬೆರೆಸಿ ಪೇಸ್ಟ್ ತಯಾರಿಸಿ. ಈ ಪ್ಯಾಕ್ ಅನ್ನು ಕೂದಲಿಗೆ ಅನ್ವಯಿಸಿ. ಒಂದು ಗಂಟೆ ಅದನ್ನು ಹಾಗೆ ಇರಿಸಿ ನಂತರ ತೊಳೆಯಿರಿ. ನಿಯಮಿತವಾಗಿ ಈ ರೀತಿ ಮಾಡುವುದರಿಂದ ಕೆಲವೇ ದಿನಗಳಲ್ಲಿ ಕೂದಲನ್ನು ಕಪ್ಪಾಗಿಸುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ಮನೆಮದ್ದುಗಳು ಉತ್ತಮವೆಂದು ಪರಿಗಣಿಸಲಾಗಿದೆ.