ಈ ಎಣ್ಣೆ ಸೇವಿಸಿದ ಹತ್ತೇ ನಿಮಿಷಕ್ಕೆ ಬಿಳಿಕೂದಲು ಕಪ್ಪಾಗುವುದು..! ಒಮ್ಮೆ ಟ್ರೈ ಮಾಡಿದ್ರೆ 60 ವರ್ಷದ ಮುದುಕರಾದ್ರೂ ಮತ್ತಯಾವತ್ತೂ ಕೂದಲು ಬೆಳ್ಳಗಾಗಲ್ಲ!
ಇಂದಿನ ಕಾಲದಲ್ಲಿ ಕೂದಲು ಉದುರುವುದು, ಬಿಳಿ ಕೂದಲು, ತಲೆಹೊಟ್ಟು ಹೀಗೆ ಅನೇಕ ಸಮಸ್ಯೆಗಳು ಅನೇಕರನ್ನು ಕಾಡುತ್ತಿದೆ. ಹೀಗಿರುವಾಗ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಅಂಶಗಳುಳ್ಳ ಹೇರ್ ಮಾಸ್ಕ್‌ಗಳನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ಅವುಗಳು ಕೆಲಸ ಮಾಡುವುದಿಲ್ಲ. ಜೊತೆಗೆ ವಿರುದ್ಧ ಪರಿಣಾಮವನ್ನು ಸಹ ಹೊಂದಿದೆ.
ಈ ರಾಸಾಯನಿಕ ವಸ್ತುಗಳನ್ನು ತ್ಯಜಿಸಿ ನೈಸರ್ಗಿಕ ಮತ್ತು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೂದಲನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ಇದಕ್ಕಾಗಿ ನೀವು ಯಾವ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಇಲ್ಲಿ ತಿಳಿಯೋಣ
ಅಲೋವೆರಾ: ಅಲೋವೆರಾ ಕೂದಲಿಗೆ ತುಂಬಾ ಪ್ರಯೋಜನಕಾರಿ. ಇದನ್ನು ಕೂದಲಿಗೆ ನೇರವಾಗಿ ಹಚ್ಚಬಹುದು. ಇದು ಕೂದಲನ್ನು ಕಂಡೀಷನಿಂಗ್ ಮಾಡಲು ಮತ್ತು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೆಂತ್ಯ ಬೀಜಗಳು: ಮೆಂತ್ಯ ಕಾಳುಗಳು ಕೂದಲು ಉದುರುವಿಕೆ ಮತ್ತು ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ, 15 ರಿಂದ 20 ನಿಮಿಷಗಳ ಕಾಲ ಮೆಂತ್ಯ ಬೀಜದ ಪೇಸ್ಟ್ ಕೂದಲಿಗೆ ಹಚ್ಚಿ ಬಿಟ್ಟರೆ ಅದ್ಭುತ ಪರಿಣಾಮಗಳನ್ನು ಕಾಣುವಿರಿ.
ಈರುಳ್ಳಿ ರಸ- ಈರುಳ್ಳಿ ರಸವು ಕೂದಲಿಗೆ ತುಂಬಾ ಪ್ರಯೋಜನಕಾರಿ. ಈರುಳ್ಳಿ ರಸವನ್ನು ವಾರಕ್ಕೆರಡು ಬಾರಿ ತಲೆಗೆ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗಿ ಕೂದಲು ಬೆಳವಣಿಗೆ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ಬಿಳಿ ಕೂದಲಿನ ಸಮಸ್ಯೆಗೆ ಚಿಟಿಕೆಯಲ್ಲಿ ಪರಿಹಾರ ನೀಡುತ್ತದೆ.
ತೆಂಗಿನ ಎಣ್ಣೆ- ತೆಂಗಿನ ಎಣ್ಣೆಯು ನೆತ್ತಿಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಸ್ನಾನ ಮಾಡುವ ಒಂದು ಗಂಟೆ ಮೊದಲು ಕೂದಲಿಗೆ ಎಣ್ಣೆಯನ್ನು ಹಚ್ಚಿ. ನಂತರ ಕೂದಲನ್ನು ತೊಳೆಯಿರಿ. ಒಣ ಮತ್ತು ಹಾನಿಗೊಳಗಾದ ಕೂದಲನ್ನು ಆರೋಗ್ಯಕರವಾಗಿಸಲು ಇದು ಸಹಾಯ ಮಾಡುತ್ತದೆ.
ಮೀನಿನ ಎಣ್ಣೆ - ಮೀನಿನ ಎಣ್ಣೆಯಲ್ಲಿ ಪ್ರೋಟೀನ್ ಮತ್ತು ಒಮೆಗಾ ಕೊಬ್ಬಿನಾಮ್ಲಗಳು ಕಂಡುಬರುತ್ತವೆ. ಇದು ನೆತ್ತಿಯ ಮೇಲೆ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡಲು, ಕೂದಲಿಗೆ ಹೊಳಪು ನೀಡಲು, ಬಿಳಿ ಕೂದಲಿಗೆ ತಕ್ಷಣ ಪರಿಹಾರ ನೀಡಲು ಮತ್ತು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಇ ನಂತೆ, ನೀವು ಮಾರುಕಟ್ಟೆಯಲ್ಲಿ ಅದರ ಕ್ಯಾಪ್ಸುಲ್ಗಳನ್ನು ಸಹ ಪಡೆಯಬಹುದು. ಇಲ್ಲವಾದಲ್ಲಿ ಈ ಎಣ್ಣೆಯನ್ನು ಅಡುಗೆಗಳಲ್ಲೂ ಬಳಕೆ ಮಾಡಬಹುದು. ಜಪಾನ್, ಕೊರಿಯಾ ಸೇರಿದಂತೆ ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಲ್ಲಿ ಈ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತದೆ. ಇದು ಕೂದಲಿಗೆ ಮಾತ್ರವಲ್ಲದೆ, ದೇಹಕ್ಕೂ ಬಹಳ ಪರಿಣಾಮಕಾರಿ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.