ಕಲರಿಂಗ್ ಬೇಕಿಲ್ಲ! ಅಡುಗೆಮನೆಯ ಈ ಮಸಾಲೆ ಸಾಕು, ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ
ಮೆಂತ್ಯ ನೀರು: ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿ. ನಂತರ ತಲೆಗೆ ಹಚ್ಚಿ, ಕೆಲ ನಿಮಿಷಗಳ ಬಳಳಿಕ ಸ್ನಾನ ಮಾಡಿ. ಹೀಗೆ ಕೆಲವು ದಿನ ಮಾಡಿದರೆ ಬಿಳಿ ಕೂದಲು ಮಾಯವಾಗುತ್ತದೆ.
ಮೆಂತ್ಯದ ಔಷಧೀಯ ಗುಣ: ಮೆಂತ್ಯದ ಔಷಧೀಯ ಗುಣಗಳನ್ನು ಹೆಚ್ಚಾಗಿ ಚರ್ಚಿಸಲಾಗುತ್ತದೆ. ನಿಮ್ಮ ಕೂದಲನ್ನು ಮತ್ತೆ ಕಪ್ಪಾಗಿಸಲು ಬಯಸಿದರೆ, 2 ಚಮಚ ಮೆಂತ್ಯ ಬೀಜಗಳನ್ನು ನೀರಿನಲ್ಲಿ ಕುದಿಸಿ ಮತ್ತು ತಣ್ಣಗಾಗಲು ಬಿಡಿ. ಈಗ ಈ ನೀರಿನಿಂದ ಕೂದಲನ್ನು ತೊಳೆಯಿರಿ.
ಮೆಂತ್ಯದ ಜೊತೆ ಬೆಲ್ಲ : ಕೂದಲಿನ ಆರೋಗ್ಯವನ್ನು ಹೆಚ್ಚಿಸಲು ಮೆಂತ್ಯವನ್ನು ಹೆಚ್ಚು ಬಳಸಲಾಗುತ್ತದೆ, ಈ ಮಸಾಲೆಯೊಂದಿಗೆ ಬೆಲ್ಲವನ್ನು ಸೇವಿಸಿದರೆ, ನೀವು ಶೀಘ್ರದಲ್ಲೇ ಬಿಳಿ ಕೂದಲಿನ ಸಮಸ್ಯೆಯಿಂದ ಮುಕ್ತರಾಗುತ್ತೀರಿ. ಇದಲ್ಲದೆ, ಕೂದಲು ಉದುರುವಿಕೆಯನ್ನು ತಡೆಯುವಲ್ಲಿ ಮೆಂತ್ಯವು ತುಂಬಾ ಪರಿಣಾಮಕಾರಿಯಾಗಿದೆ.
ಮೆಂತ್ಯ ಹೇರ್ ಪ್ಯಾಕ್ : ಮೆಂತ್ಯವನ್ನು ರುಬ್ಬಿ, ಪೇಸ್ಟ್ ತಯಾರಿಸಿ. ಈಗ ಅದಕ್ಕೆ ನಿಂಬೆ ರಸವನ್ನು ಬೆರೆಸಿ. ಈಗ ಈ ಪೇಸ್ಟ್ ಅನ್ನು ಕೂದಲಿನ ಬೇರುಗಳಿಗೆ ಹಚ್ಚಿ. ಇದರಿಂದ ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ.
ತೆಂಗಿನೆಣ್ಣೆ: ಇದು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ. ನೀವು ಮೆಂತ್ಯವನ್ನು ಪುಡಿಮಾಡಿ ತೆಂಗಿನೆಣ್ಣೆಯಲ್ಲಿ ಬೆರೆಸಿ, ತಲೆಗೆ ಹಚ್ಚಿದರೆ ಕೂದಲು ಕಪ್ಪಾಗುತ್ತದೆ. ಅಲ್ಲದೇ, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ದೂರವಾಗುತ್ತದೆ.