ಈ ಹೂವನ್ನು ಅರೆದು ತಲೆಗೆ ಹಚ್ಚಿ ಸಾಕು.. ಕೂದಲು ಗಾಢ ಕಪ್ಪಾಗಿ ದಷ್ಟಪುಷ್ಟವಾಗಿ ಬೆಳೆದು ರೇಷ್ಮೆಯಂತೆ ಹೊಳೆಯುವುದು!
ಎಲ್ಲರ ಮನೆಯಂಗಳದಲ್ಲಿ ಸಿಗುವ ಸಾಮಾನ್ಯ ಹೂವು ದಾಸವಾಳ. ಇದರ ಪ್ರಯೋಜನಳು ಒಂದೆರಡಲ್ಲ.. ಸರಿಯಾಗಿ ಬಳಸಿದರೆ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು.
ದಾಸವಾಳ ಕೂದಲು ಬಿಳಿಯಾಗುವುದನ್ನು ತಡೆಯಲು ಪರಿಣಾಮಕಾರಿಯಾಗಿದೆ. ಸೂರ್ಯನ ಬೆಳಕು ಮತ್ತು ಮಾಲಿನ್ಯ, ಆಧುನಿಕ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
ದಾಸವಾಳ ಹೂವಿನ ಹೇರ್ ಮಾಸ್ಕ್ ತಯಾರಿಸಿ ಹಚ್ಚಿಕೊಂಡರೆ ಬಿಳಿ ಕೂದಲನ್ನು ರಾಸಾಯನಿಕ ಆಧಾರಿತ ಹೇರ್ ಕಲರ್ ಇಲ್ಲದೇಯೇ ಕಪ್ಪಾಗಿಸಬಹುದು. ಕೂದಲು ಉದುರುವ ಸಮಸ್ಯೆಗೆ ಕೂಡ ಇದು ಪರಿಣಾಮಕಾರಿಯಾಗಿದೆ.
ಬಿಳಿ ಕೂದಲು ಹೊಂದಿರುವವರು ಗೋರಂಟಿ ಎಲೆ ಮತ್ತು ದಾಸವಾಳ ಹೂವು ಬಳಸಿ ಮಾಡುವ ಈ ಹೇರ್ ಮಾಸ್ಕ್ ಹಚ್ಚಿಕೊಳ್ಳಬೇಕು. ಇದು ಕೂದಲಿನ ಹೊಳಪಿಗೆ ಕಾರಣವಾಗುತ್ತದೆ. ಒಣ ನಿರ್ಜೀವ ಕೂದಲು ರೇಷ್ಮೆಯಂತೆ ಮಿಂಚಲು ಆರಂಭಿಸುತ್ತದೆ.
ಗೋರಂಟಿ ಎಲೆಗಳು ಮತ್ತು ದಾಸವಾಳ ಹೂವಿನ ಪೇಸ್ಟ್ ಹಚ್ಚುವುದರಿಂದ ಕೂದಲಿನ ಬಣ್ಣ ನೈಸರ್ಗಿಕವಾಗಿ ಕಪ್ಪಾಗುತ್ತದೆ. ಮೊದಲು ಒಂದಷ್ಟು ಗೋರಂಟಿ ಎಲೆಗಳನ್ನು ಸಂಗ್ರಹಿಸಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ.
ದಾಸವಾಳ ಹೂವುಗಳನ್ನು ತೆಗೆದುಕೊಂಡು ತೊಳೆಯಿರಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಮತ್ತು ಅದಕ್ಕೆ 10 ದಾಸವಾಳ ಹೂವು ಹಾಕಿ ಚೆನ್ನಾಗಿ ಕುದಿಸಿ. ಈಗ ಅದನ್ನು ತಣ್ಣಗಾಗಲು ಬಿಡಿ. ನಂತರ ನೀರಿನಲ್ಲಿ ಗೋರಂಟಿ ಎಲೆಯ ಪುಡಿಯನ್ನು ಬೆರೆಸಿ ಒಂದು ಗಂಟೆ ಬಿಡಿ.
ಗೋರಂಟಿ ಪುಡಿ ಮತ್ತು ದಾಸವಾಳದ ಪೇಸ್ಟ್‌ಗೆ ತೆಂಗಿನೆಣ್ಣೆ ಸೇರಿಸಿ ತಲೆಗೆ ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಸುಮಾರು ಒಂದು ಗಂಟೆಯ ನಂತರ ತಲೆ ಸ್ನಾನ ಮಾಡಿದರೆ ಕೂದಲು ಕಪ್ಪಾಗುವುದರ ಜೊತೆಗೆ ತಲೆಹೊಟ್ಟು ನಿವಾರಣೆ ಆಗುವುದು
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.