ಹೇರ್ ಡೈ ಬೇಡವೇ ಬೇಡ … ಈ ಎರಡು ಎಣ್ಣೆಗಳಿದ್ದರೆ ಬಿಳಿಕೂದಲು ಬುಡಸಮೇತ ಕಪ್ಪಾಗುತ್ತೆ!
ಕೂದಲು ತಜ್ಞರ ಪ್ರಕಾರ, ಪೌಷ್ಟಿಕಾಂಶದ ಕೊರತೆಯಿಂದಾಗಿ ಕೂದಲು ಕ್ರಮೇಣ ತೆಳುವಾಗಲು ಪ್ರಾರಂಭಿಸುತ್ತದೆ ಮತ್ತು ನಂತರ ದುರ್ಬಲಗೊಳ್ಳುತ್ತದೆ, ಬಳಿಕ ಉದುರಲು ಶುರುವಾಗುತ್ತದೆ. ಇಂತಹ ಸಮಸ್ಯೆಗಳಿಗೆ ಕೆಲವು ಮನೆಮದ್ದುಗಳನ್ನು ನಾವಿಂದು ಹೇಳಲಿದ್ದೇವೆ. ಈ ಸಲಹೆಗಳನ್ನು ಪ್ರಯತ್ನಿಸುವ ಮೂಲಕ ನಿಮ್ಮ ಕೂದಲು ದಪ್ಪ ಮತ್ತು ಕಪ್ಪು ಆಗಬಹುದು.
ವೈದ್ಯರ ಪ್ರಕಾರ, ಒತ್ತಡದ ಜೀವನಶೈಲಿ, ಕೂದಲನ್ನು ಬಿಗಿಯಾಗಿ ಕಟ್ಟುವುದು, ಸ್ನಾನದ ನಂತರ ಕೂದಲನ್ನು ಒಣಗಿಸಲು ಹೇರ್ ಡ್ರೈಯರ್ ನಿಂದ ಹೆಚ್ಚು ಬಿಸಿಯಾಗಿಸುವುದರಿಂದ ಕೂದಲಿನ ಸಮಸ್ಯೆಗಳಿಗೆ ಕಾರಣವಾಗಬಹುದು.
ಕೂದಲಿನ ತಜ್ಞರ ಪ್ರಕಾರ, ಕೂದಲು ಉದುರುವಿಕೆ ಮತ್ತು ಬಿಳಿಯಾಗುವುದನ್ನು ತಡೆಯಲು ನೀವು ಮೆಂತ್ಯೆ ಬೀಜಗಳನ್ನು ಬಳಸಬಹುದು. ಇದಕ್ಕಾಗಿ ಮೆಂತ್ಯವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ, ನೀರನ್ನು ಫಿಲ್ಟರ್ ಮಾಡಿ ಮತ್ತು ನಂತರ ಆ ಧಾನ್ಯಗಳನ್ನು ಪೇಸ್ಟ್ ಮಾಡಿಟ್ಟುಕೊಳ್ಳಿ. ಆ ಪೇಸ್ಟ್ ಅನ್ನು ಸುಮಾರು 50 ನಿಮಿಷಗಳ ಕಾಲ ಕೂದಲಿಗೆ ಹಚ್ಚಿ ಬಿಟ್ಟುಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಮೆಂತೆ ಎಣ್ಣೆಯನ್ನು ಸಹ ಕೂದಲಿಗೆ ಬಳಸಬಹುದು.
ತೆಂಗಿನ ಎಣ್ಣೆಯನ್ನು ಕೂದಲಿನ ಸರ್ವ ಸಮಸ್ಯೆಗೆ ರಾಮಬಾಣವೆಂದು ಪರಿಗಣಿಸಲಾಗಿದೆ. ಇದರ ಬಳಕೆಯಿಂದ ಕೂದಲು ಉದುರುವಿಕೆ ನಿವಾರಣೆಯಾಗುತ್ತದೆ. ಪ್ರತಿದಿನ ಬೆಳಿಗ್ಗೆ 1-2 ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಕೂದಲಿನ ಬೇರುಗಳು ಸೇರಿದಂತೆ ನೆತ್ತಿಯ ಮೇಲೆ ಸಂಪೂರ್ಣವಾಗಿ ಹಚ್ಚಿ. ಸುಮಾರು ಒಂದು ಗಂಟೆ ನಂತರ ತೊಳೆಯಿರಿ. ಕೊಬ್ಬರಿ ಎಣ್ಣೆಯನ್ನು ಪ್ರತಿನಿತ್ಯ ಹಚ್ಚುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಈ ಎಣ್ಣೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)