ಡೈ, ಹೇರ್ ಪ್ಯಾಕ್ ಅಗತ್ಯವೇ ಇಲ್ಲ… ಈ ತರಕಾರಿಗಳನ್ನು ತಿಂದ್ರೆ ಸಾಕು ಬುಡದಿಂದಲೇ ಕಪ್ಪಾಗುತ್ತೆ ಬಿಳಿಕೂದಲು!
ಬದಲಾಗುತ್ತಿರುವ ಜೀವನಶೈಲಿ, ಮಾಲಿನ್ಯ ಮತ್ತು ತಪ್ಪು ಆಹಾರ ಪದ್ಧತಿಗಳು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕೆಲವರು ವೈದ್ಯರ ಸಹಾಯವನ್ನು ತೆಗೆದುಕೊಳ್ಳುತ್ತಿದ್ದರೆ, ಕೆಲವರು ಅಜ್ಜಿ ಹೇಳುವ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ
ಕೂದಲು ಕ್ರಮೇಣ ಬಿಳಿಯಾಗುವುದರಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ಈ ಆಹಾರಪದ್ದತಿಯನ್ನು ಅನುಸರಿಸಿದರೆ ಬೆಸ್ಟ್. ಕೂದಲು ಕಪ್ಪಾಗಿರಲು ಕೆಲವು ವಿಟಮಿನ್ ಗಳು ಬಹಳ ಮುಖ್ಯ. ಅದಕ್ಕಾಗಿಯೇ ನಿಮ್ಮ ಆಹಾರದಲ್ಲಿ ಈ ವಸ್ತುಗಳನ್ನು ಸೇರಿಸಿ.
ಬಾದಾಮಿಯಲ್ಲಿ ತಾಮ್ರ ಮತ್ತು ವಿಟಮಿನ್ ಇ ಇದ್ದು ಇದು ನಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಕೂದಲಿಗೆ ಬಾದಾಮಿ ಎಣ್ಣೆಯನ್ನು ಹಚ್ಚಲು ಶಿಫಾರಸು ಮಾಡಲಾಗುತ್ತದೆ. ಪ್ರತೀದಿನ ಬಾದಾಮಿಯನ್ನು ಸೇವಿಸಿದರೆ ಒಳಿತಾಗುವುದು ಖಂಡಿತ.
ಮಶ್ರೂಮ್ ಕೂಡ ಕೂದಲಿಗೆ ಬಣ್ಣವನ್ನು ನೀಡುತ್ತದೆ. ಅಣಬೆ ಸೇವಿಸಿದರೆ ದೇಹದಲ್ಲಿ ತಾಮ್ರದ ಅಂಶ ಹೆಚ್ಚಳವಾಗುತ್ತದೆ. ಕೂದಲ ಬಣ್ಣ ಕಡುಕಪ್ಪಾಗಲು ಮಶ್ರೂಮ್ ನಲ್ಲಿರುವ ತಾಮ್ರದ ಅಂಶ ಸಹಾಯಕ.
ಎಲೆಕೋಸು ಮತ್ತು ಪಾಲಕ್ ಮುಂತಾದ ಹಸಿರು ಎಲೆಗಳ ತರಕಾರಿಗಳನ್ನು ತಿನ್ನಲು ಪ್ರಾರಂಭಿಸಿ. ಅವು ತಲೆಗೆ ಅಗತ್ಯವಾದ ಬಿ ಜೀವಸತ್ವಗಳನ್ನು ಒದಗಿಸುತ್ತದೆ.
ಮೊಟ್ಟೆಯಲ್ಲಿ ವಿಟಮಿನ್ ಬಿ-12 ಇದೆ. B-12 ಅಂಶವು ಕೂದಲನ್ನು ಕಪ್ಪುಗೊಳಿಸಲು ಸಹಾಯಕವಾಗಿದೆ. ಹೀಗಾಗಿ ಪ್ರತಿ ಭಾನುವಾರ ಅಥವಾ ಸೋಮವಾರ ಮೊಟ್ಟೆಗಳನ್ನು ಸೇವಿಸಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)