White Hair Remedies: ನಿಮ್ಮ ಆಹಾರದಲ್ಲಿನ ಈ ನಾಲ್ಕು ಪದಾರ್ಥಗಳು ಬಿಳಿ ಕೂದಲು ಸಮಸ್ಯೆಗೆ ಸೂಪರ್ ಫುಡ್ ಇದ್ದಂತೆ!
ಬೂದು ಕೂದಲನ್ನು ತಪ್ಪಿಸಲು ಜನರು ಅನೇಕ ಪರಿಹಾರಗಳನ್ನು ಅನುಸರಿಸುತ್ತಾರೆ. ಆದರೆ ಇಂದು ನಾವು ನಿಮಗೆ ನಿಮ್ಮ ಕೂದಲನ್ನು ಕಪ್ಪಾಗಿಸಲು ಕೆಲ ಮನೆಮದ್ದುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ನಿಮ್ಮ ಕೂದಲನ್ನು ಅತ್ಯಂತ ವೇಗವಾಗಿ ಕಪ್ಪಾಗಿಸುತ್ತವೆ. ಕೂದಲನ್ನು ಕಪ್ಪಾಗಿಸಲು ಏನೆಲ್ಲಾ ವಸ್ತುಗಳನ್ನು ಬಳಸಬಹುದು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,
ಸಂಡೆ ಹೊ ಯಾ ಮಂಡೆ, ರೋಜ್ ಖಾವೋ ಅಂಡೆ, ಈ ಮಾತನ್ನು ನೀವು ಆಗಾಗ್ಗೆ ಕೇಳಿರಬೇಕು. ಹೌದು, ಇದನ್ನು ಸಹ ಹೇಳಲಾಗುತ್ತದೆ ಏಕೆಂದರೆ ಮೊಟ್ಟೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಹಾರ ಪದಾರ್ಥವಾಗಿದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆಗಳು ನಮ್ಮ ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ. ನೈಸರ್ಗಿಕವಾಗಿ ಬೂದು ಕೂದಲನ್ನು ಕಪ್ಪಾಗಿಸಲು ಇದು ಸಹಾಯ ಮಾಡುತ್ತದೆ.
ಮೊಸರು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಆಗಾಗ್ಗೆ ಕೇಳಿರಬಹುದು, ಆದರೆ ಮೊಸರು ಕೂದಲಿಗೆ ಪರಿಣಾಮಕಾರಿ ಎಂಬುದನ್ನು ನೀವು ಅಪರೂಪವಾಗಿ ಕೇಳಿರಬಹುದು. ಆದರೆ ಮೊಸರಿನ ಬಳಕೆಯು ಬಿಳಿ ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುತಾಗುತ್ತದೆ. ವಾಸ್ತವದಲ್ಲಿ, ವಿಟಮಿನ್ ಬಿ 12 ಸಮೃದ್ಧವಾಗಿರುವ ಮೊಸರು ನಮ್ಮ ಕೂದಲು ಅಕಾಲಿಕವಾಗಿ ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ.
ಮೆಂತ್ಯ, ಕಬ್ಬಿಣ ಮತ್ತು ಫೈಬರ್‌ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ನಮ್ಮ ಬೂದು ಕೂದಲಿಗೆ ರಾಮಬಾಣವಾಗಿದೆ. ಮೆಂತ್ಯವನ್ನು ನಿಯಮಿತವಾಗಿ ಬಳಸುವುದರಿಂದ ಕಪ್ಪು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಮೆಂತ್ಯವು ಕೂದಲಿನಲ್ಲಿ ಮೆಲನಿನ್ ಎಂಬ ಅಂಶವನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಕಾರಣ ಮೆಲನಿನ್ ಕೊರತೆಯಿಂದ ನಮ್ಮ ಕೂದಲು ಬೇಗ ಬೆಳ್ಳಗಾಗುತ್ತದೆ.
ಸೋಯಾಬೀನ್, ಸಸ್ಯ ಆಧಾರಿತ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಿಮ್ಮ ಕೂದಲು ಆರೋಗ್ಯಕರವಾಗಿರಲು ನೀವು ಇದನ್ನು ಸೇವಿಸಬಹುದು. ನಿಮ್ಮ ಕೂದಲು ಅಕಾಲಿಕವಾಗಿ ಬಿಳಿಯುತ್ತಿದ್ದರೆ, ಪ್ರತಿದಿನ ಸೋಯಾಬೀನ್ ಅನ್ನು ಸೇವಿಸಲು ಪ್ರಾರಂಭಿಸಿ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕೂದಲಿಗೆ ವಿಶೇಷವಾಗಿ ಉತ್ತಮವಾಗಿದೆ.
(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)