White Hair Remedy: ಅಪ್ಪಿತಪ್ಪಿಯೂ ಬಿಳಿ ಕೂದಲನ್ನು ಕೀಳಬೇಡಿ.. ಈ ಸುಲಭ ಮನೆಮದ್ದನ್ನು ಟ್ರೈ ಮಾಡಿ ಶಾಶ್ವತವಾಗಿ ಕಪ್ಪಾಗುತ್ತೆ!!
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಹದಿಹರೆಯದಿಂದಲೇ ಈ ಸಮಸ್ಯೆ ಇರುತ್ತದೆ. ಆದರೆ ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಸಾಕಷ್ಟು ಹಣ ಖರ್ಚು ಮಾಡುವರಿದ್ದಾರೆ... ಉತ್ತಮ ಫಲಿತಾಂಶ ಸಿಗದೇ ಬೇಸೋತ್ತಿರುವವರು ಇದ್ದಾರೆ.. ಆದರೆ ರಾಸಾಯನಿಕಗಳ ಅತಿಯಾದ ಬಳಕೆಯು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಕಡಿಮೆ ವೆಚ್ಚದಲ್ಲಿ ಇದಕ್ಕೆ ಉತ್ತಮ ಪರಿಹಾರವಿದೆ. ಅದನ್ನು ಇದೀಗ ತಿಳಿಯೋಣ..
ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ ಬೇವು ಬಿಳಿ ಕೂದಲಿನ ಸಮಸ್ಯೆಯನ್ನು ನೈಸರ್ಗಿಕವಾಗಿ ನಿವಾರಿಸುತ್ತದೆ.. ಬೇವಿನಲ್ಲಿ ವಿಶೇಷವಾಗಿ ಒಲೀಕ್ ಆಮ್ಲ ಮತ್ತು ಲಿನೋಲಿಕ್ ಆಮ್ಲವಿದೆ. ಬೇವಿನ ನೀರನ್ನು ಕೂದಲಿಗೆ ಹಚ್ಚುವುದು ತುಂಬಾ ಒಳ್ಳೆಯದು. ಇದಲ್ಲದೆ, ಬೇವಿನಲ್ಲಿ ವಿಟಮಿನ್ ಇ ಮತ್ತು ಸಿ ಕೂಡ ಇದೆ. ಇವು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಡ್ಯಾಂಡ್ರಫ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೇವು ಉತ್ತಮ ಪರಿಹಾರವಾಗಿದೆ.
ಈ ಮನೆಮದ್ದನ್ನು ತಯಾರಿಸಲು ಬೇವಿನ ಎಲೆಗಳನ್ನು ಕುದಿಸಿ ಆ ನೀರನ್ನು ಕೂದಲಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ.. ಇದರಿಂದ ಕೂದಲಿನ ಬುಡವೂ ಬಲಿಷ್ಟವಾಗಿ.. ದಷ್ಟ ಪುಷ್ಟ ಕಪ್ಪು ಕೂದಲು ನಿಮ್ಮದಾಗುತ್ತದೆ..
ಬರೀ ಬೇವಿನ ಎಲೆ ಮಾತ್ರವಲ್ಲ ಇವುಗಳನ್ನು ಒಣಗಿಸಿ ಪುಡಿ ಮಾಡಿಯೂ ಬಳಸಬಹುದಾಗಿದೆ.. ಹೌದು ಬಿಳಿ ಕೂದಲನ್ನು ಹೋಗಲಾಡಿಸಲು ಸ್ನಾನ ಮಾಡುವಾಗ ಪ್ರತಿ ದಿನ ಕೂದಲಿಗೆ ಬೇವಿನ ಪುಡಿಯನ್ನು ನೀರಿನಲ್ಲಿ ಮಿಕ್ಸ್ ಮಾಡಿ ಹಚ್ಚಿ ಸ್ವಲ್ಪ ಸಮಯ ಬಿಟ್ಟು ತೊಳೆದರೆ ಶೀಘ್ರದಲ್ಲೇ ಉತ್ತಮ ಫಲಿತಾಂಶ ಪಡೆಯುಬಹುದಾಗಿದೆ..
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.