ಹೇರ್ ಕಲರ್ ಬೇಕಿಲ್ಲ.! 15 ನಿಮಿಷದಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸುತ್ತೆ ನೈಸರ್ಗಿಕ ವಿಧಾನ
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಹೇರ್ ಮಾಸ್ಕ್ ಬಳಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.
ಕಾಫಿ ಹೇರ್ ಮಾಸ್ಕ್ ತಯಾರಿಸಲು ಬೇಕಾಗುವ ಪದಾರ್ಥಗಳು: ಕಪ್ ಮೊಸರು, ಎರಡರಿಂದ ಮೂರು ಟೀ ಚಮಚ ಕಾಫಿ ಮತ್ತು ಟೀ ಪುಡಿ, ಎರಡು ಟೀ ಚಮಚ ಆಲಿವ್ ಎಣ್ಣೆ, ಎರಡು ಟೀ ಚಮಚ ಜೇನುತುಪ್ಪ
ಈ ಹೇರ್ ಮಾಸ್ಕ್ ಮಾಡುವುದು ಹೇಗೆ: ಒಂದು ಸಣ್ಣ ಬೌಲ್ ನಲ್ಲಿ ಮೊಸರು, ಕಾಫಿ ಮತ್ತು ಟೀ ಪುಡಿ, ಆಲಿವ್ ಎಣ್ಣೆ, ಜೇನುತುಪ್ಪ ಹಾಕಿಕೊಳ್ಳಿ. ನಾಲ್ಕು ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 15 ನಿಮಿಷಗಳ ಕಾಲ ಪಕ್ಕಕ್ಕೆ ಇಡಬೇಕು. ಈಗ ಕಾಫಿ ಹೇರ್ ಮಾಸ್ಕ್ ರೆಡಿ.
ಕಾಫಿ ಹೇರ್ ಮಾಸ್ಕ್ ಅನ್ನು ಹೇಗೆ ಬಳಸುವುದು: ಕಾಫಿ ಹೇರ್ ಮಾಸ್ಕ್ ಬಳಸುವ ಮೊದಲು ಕೂದಲನ್ನು ತೊಳೆದು ಒಣಗಿಸಬೇಕು. ಅದರ ನಂತರ ಕೂದಲಿನ ಬೇರಿಗೆ ಇದನ್ನು ಹಚ್ಚಬೇಕು. ನಂತರ 30 ನಿಮಿಷಗಳ ಕಾಲ ಒಣಗಲು ಬಿಡಿ. ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.
ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು, ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ತೆಗೆದುಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ದೃಢೀಕರಿಸುವುದಿಲ್ಲ.