ಬಿಳಿ ಕೂದಲನ್ನು ಒಂದೇ ವಾರದಲ್ಲಿ ಶಾಶ್ವತವಾಗಿ ಕಪ್ಪಾಗಿಸುತ್ತದೆ ಈ ಹೂವಿನ ಹೇರ್ ಮಾಸ್ಕ್!
ಅನೇಕ ಜನರು ಉದ್ದ, ದಪ್ಪ ಕಪ್ಪಾದ ಕೂದಲಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಆದರೆ ಇವುಗಳನ್ನು ಬಳಸುವುದರಿಂದ ಸಿಗುವ ಫಲಿತಾಂಶ ಸ್ವಲ್ಪ ಕಾಲ ಮಾತ್ರ ಉಳಿಯುತ್ತದೆ ಎನ್ನುತ್ತಾರೆ ತಜ್ಞರು.
ದಾಸವಾಳ ಹೂವು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಅಮೈನೋ ಆಮ್ಲಗಳು, ವಿಟಮಿನ್ ಸಿ ಮತ್ತು ಆಂಟಿಮೈಕ್ರೊಬಿಯಲ್ಗಳಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಎಲ್ಲಾ ರೀತಿಯ ಪೋಷಕಾಂಶಗಳು ದೊರೆಯುತ್ತದೆ.
ಇದನ್ನು ಚಹಾದಂತೆ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ದಾಸವಾಳ ಚಹಾವನ್ನು ಕುಡಿಯಬೇಕು. ಇದಲ್ಲದೆ, ದಾಸವಾಳದ ನೀರನ್ನು ಕೂದಲಿಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ.
ದಾಸವಾಳ ಹೂವಿನ ಹೇರ್ ಮಾಸ್ಕ್ ತಯಾರಿಸಲು ಮೊದಲು ದಾಸವಾಳದ ಪುಡಿಯನ್ನು ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಮತ್ತು ಕೊಬ್ಬರಿ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಇದನ್ನು ನಿಯಮಿತವಾಗಿ ಕೂದಲಿಗೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ಅಲ್ಲದೆ ಬಿಳಿ ಕೂದಲು ಕಪ್ಪಾಗುತ್ತದೆ.
ದಾಸವಾಳದ ಹೂವುಗಳನ್ನು ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ ಬಳಸಿದರೆ ಬಿಳಿ ಕೂದಲು ಕಪ್ಪಾಗುತ್ತದೆ. ಅಲ್ಲದೇ ಉದ್ದ ದಪ್ಪ ಕೂದಲು ನಿಮ್ಮದಾಗುತ್ತದೆ.