ಹೇರ್ ಡೈ ಬೇಕಿಲ್ಲ.. ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತವೆ ಈ ಬೀಜಗಳು.!
ಬಿಳಿ ಕೂದಲನ್ನು ಸರಳವಾದ ಆಯುರ್ವೇದ ಸಲಹೆಗಳಿಂದ ಶಾಶ್ವತವಾಗಿ ಕಪ್ಪಾಗಿಸಬಹುದು. ಆಯುರ್ವೇದ ತಜ್ಞರು ಸೂಚಿಸಿರುವ ಕೆಲವು ಸಲಹೆಗಳನ್ನು ಪಾಲಿಸಿದರೆ ಬಿಳಿ ಕೂದಲು ಕೆಲವೇ ದಿನಗಳಲ್ಲಿ ಕಪ್ಪಾಗುತ್ತವೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಆಯುರ್ವೇದ ತಜ್ಞರು ಸೂಚಿಸಿರುವ ಸಲಹೆಗಳನ್ನು ಹೇಗೆ ಬಳಸಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.
ಅಂಟುವಾಳ ಕಾಯಿಯಲ್ಲಿರುವ ಆಯುರ್ವೇದ ಗುಣಗಳು ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ಪರಿಣಾಮಕಾರಿಯಾಗಿದೆ.
ಅಂಟುವಾಳ ಕಾಯಿಯಿಂದ ವಿಶೇಷವಾಗಿ ತಲೆಹೊಟ್ಟು ನಿವಾರಣೆಯಾಗುವುದು. ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ತಲೆಸ್ನಾನದ ಸಮಯದಲ್ಲಿ ಶಾಂಪೂ ಬದಲಿಗೆ ಬಳಸಬೇಕು.
ಅಂಟುವಾಳ ಕಾಯಿ ಬಳಸುವುದರಿಂದ ಕೂದಲಿನ ಬುಡದಲ್ಲಿರುವ ಕೊಳೆ ನಿವಾರಣೆ ಆಗುತ್ತದೆ.
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಅಂಟುವಾಳ ಕಾಯಿಯನ್ನು ಒಡೆದು, ಒಣಗಿಸಿ. ಇದನ್ನು ಪುಡಿ ಮಾಡಿ.
ಅಂಟುವಾಳ ಕಾಯಿ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಟ್ಟು, ನಂತರ ಸ್ನಾನ ಮಾಡಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
ಇದರಿಂದ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.