White Hair: ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಮೆಹಂದಿ ಜೊತೆ ಇದನ್ನು ಬೆರೆಸಿ ಹಚ್ಚಿ!
ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಿನ ಪ್ರಮಾಣದ ರಾಸಾಯನಿಕಗಳನ್ನು ಒಳಗೊಂಡಿರುವ ಬಣ್ಣಗಳನ್ನು ಬಳಸುತ್ತಿದ್ದಾರೆ. ಆದರೆ ಇವುಗಳ ಬಳಕೆ ತುಂಬಾ ಅಪಾಯಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
ಗೋರಂಟಿ ಆಧಾರಿತ ಉತ್ಪನ್ನಗಳನ್ನು ಪ್ರತಿದಿನ ಬಳಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು. ಗೋರಂಟಿ ಜೊತೆ ಈ ಪದಾರ್ಥಗಳನ್ನು ಬೆರೆಸಿ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಜೊತೆಗೆ ಕೂದಲು ಉದುರುವುದು ಕೂಡ ಕಡಿಮೆಯಾಗುತ್ತದೆ.
ಬಿಳಿ ಕೂದಲು ಹೋಗಲಾಡಿಸಲು ಗೋರಂಟಿ ಜೊತೆ ಅಮೃತಬಳ್ಳಿಯನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಮೊದಲು ನೀವು ಒಂದು ಸಣ್ಣ ಕಪ್ ತೆಗೆದುಕೊಳ್ಳಬೇಕು. ಗೋರಂಟಿ ತೆಗೆದುಕೊಂಡು ಅದನ್ನು ನೀರಿನೊಂದಿಗೆ ಮಿಶ್ರಣ ಮಾಡಿ. ನಂತರ ಆಮ್ಲಾ ಪುಡಿಯನ್ನು ಸೇರಿಸಿ, ಇಡೀ ರಾತ್ರಿ ನೆನೆಸಿಡಿ. ಬಳಿಕ ಕೂದಲಿಗೆ ಹಚ್ಚಿ, ಒಣಗಿದ ನಂತರ ತಲೆ ಸ್ನಾನ ಮಾಡಿ.
ಅನೇಕ ಜನರು ತಮ್ಮ ಕೂದಲನ್ನು ನೈಸರ್ಗಿಕವಾಗಿ ಬಣ್ಣ ಮಾಡಲು ಗೋರಂಟಿ ಬಳಸುತ್ತಾರೆ. ಆದರೆ ಇದೇ ಗೋರಂಟಿಗೆ ಕಾಫಿ ಪೌಡರ್ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಸುಲಭವಾಗಿ ಉತ್ತಮ ಫಲಿತಾಂಶ ಸಿಗುತ್ತದೆ. ಇದರ ಬಳಕೆಯು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲು ಶಾಶ್ವತವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಆಯುರ್ವೇದ ತಜ್ಞರು, ಹೇಳುವಂತೆ ಗೋರಂಟಿ ಜೊತೆಗೆ ಮೊಟ್ಟೆಗೆ ನಿಂಬೆರಸ ಬೆರೆಸಿ ಹಚ್ಚಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಈ ಮಿಶ್ರಣವನ್ನು ಬಳಸುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ. ಜೊತೆಗೆ ಉದುರುವುದು ಕೂಡ ಕಡಿಮೆಯಾಗುತ್ತದೆ. 3 ರಿಂದ 4 ಚಮಚ ಗೋರಂಟಿ ಒಂದು ಮೊಟ್ಟೆಯ ಬಿಳಿಭಾಗ ಮತ್ತು 3 ಚಮಚ ನಿಂಬೆ ರಸವನ್ನು ಸೇರಿಸಿ ಪೇಸ್ಟ್ ಮಾಡಿ. ನಂತರ ಗಂಟೆಗಟ್ಟಲೆ ಪಕ್ಕಕ್ಕೆ ಇರಿಸಿ. ತದನಂತರ ಅದನ್ನು ಕೂದಲಿಗೆ ಹಚ್ಚಿ. ಬಳಿಕ ತೊಳೆಯಿರಿ. ಇದನ್ನು ನಿಯಮಿತವಾಗಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.