White Hair Remedies: ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಈರುಳ್ಳಿ ಸಿಪ್ಪೆಯನ್ನು ಈ ರೀತಿ ಬಳಸಿ
ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಬಯಸುವಿರಾ..! ಅಂತಹವರಿಗೆ ಈರುಳ್ಳಿ ಸಿಪ್ಪೆ ಒಂದು ಸುಲಭ ಪರಿಹಾರವಾಗಿದೆ. ಈರುಳ್ಳಿ ಸಿಪ್ಪೆಯಿಂದ ಬಿಳಿ ಕೂದಲನ್ನು ಕಪ್ಪಾಗಿಸಲು ಬೇಕಾಗುವ ಪದಾರ್ಥಗಳೇನು? ಇದನ್ನು ಹೇಗೆ ಬಳಸುವುದು ಎಂದು ತಿಳಿಯೋಣ...
ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು ಅಡುಗೆ ಮನೆಯಲ್ಲಿ ಲಭ್ಯವಿರುವ ಕೆಲವು ಪದಾರ್ಥಗಳು ತುಂಬಾ ಪ್ರಯೋಜನಕಾರಿ ಆಗಿವೆ. ಮನೆಯಲ್ಲಿಯೇ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ... * ಒಂದು ಬಟ್ಟಲು ಈರುಳ್ಳಿ ಸಿಪ್ಪೆ * ಒಂದು ಬಾದಾಮಿ * ಅರ್ಧ ಚಮಚ ಮೆಂತ್ಯೆ ಕಾಳು * ಒಂದು ವಿಟಮಿನ್ ಇ ಕ್ಯಾಪ್ಸುಲ್ * 2 ಚಮಚ ಕೊಬ್ಬರಿ ಎಣ್ಣೆ
ಮೊದಲಿಗೆ ಈರುಳ್ಳಿ ಸಿಪ್ಪೆಯನ್ನು ಬಾಣೆಲೆಗೆ ಹಾಕಿ, ಅದರೊಂದಿಗೆ ಬಾದಾಮಿ, ಮೆಂತ್ಯ ಕಾಳನ್ನು ಕೂಡ ಹಾಕಿ ಅದು ಕಪ್ಪಾಗುವವರೆಗೆ ಚೆನ್ನಾಗಿ ಹುರಿಯಿರಿ. ಬಳಿಕ ಅದನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ನಂತರ ಈ ಪುಡಿಯನ್ನು ಒಂದು ಬಟ್ಟಲಿಗೆ ಹಾಕಿ ಅದರಲ್ಲಿ ಒಂದು ವಿಟಮಿನ್ ಇ ಕ್ಯಾಪ್ಸುಲ್ ಮತ್ತು 2 ಚಮಚ ಕೊಬ್ಬರಿ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ.
ತಯಾರಿಸಿಟ್ಟ ಹೇರ್ ಡೈ ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ, ಒಂದೆರಡು ಗಂಟೆಗಳ ಕಾಲ ಒಣಗಳು ಬಿಡಿ.
ಈ ಹೇರ್ ಡೈ ಒಣಗಿನ ಬಳಿಕ ಸಾಮಾನ್ಯ ನೀರಿನಿಂದ ಸೌಮ್ಯ ಶಾಂಪೂವಿನೊಂದಿಗೆ ಹೇರ್ ವಾಶ್ ಮಾಡಿ. ಇದರಿಂದ ಬಿಳಿ ಕೂದಲು ಮೊದಲ ಬಾರಿಗೆ ಕಪ್ಪಾಗುತ್ತದೆ. ನೀವು ಕಸ ಎಂದು ಬಿಸಾಡುವ ಈರುಳ್ಳಿ ಸಿಪ್ಪೆಯಿಂದ ತಯಾರಿಸಿದ ಈ ಮನೆಮದ್ದನ್ನು ನಿಯಮಿತವಾಗಿ ಬಳಸುವುದರಿಂದ ನಿಮ್ಮ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.