ಒಂದು ಕಪ್ ನೀರಿಗೆ ಈ ಬೀಜದ ಪುಡಿ ಬೆರೆಸಿ ತಲೆಗೆ ಹಚ್ಚಿ: 30 ನಿಮಿಷದಲ್ಲಿ ಬಿಳಿ ಕೂದಲು ಕಡು ಕಪ್ಪಾಗಿ, ತಿಂಗಳಲ್ಲಿ ಮಾರುದ್ದ ಬೆಳೆಯುತ್ತೆ!
ಬಿಳಿ ಕೂದಲು ಮೊದಲೆಲ್ಲ ವಯಸ್ಸಾದಂತೆ ಶುರುವಾಗುತ್ತಿತ್ತು. ಇದು ಮುಪ್ಪಿನ ಸಂಕೇತವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲು ಚಿಕ್ಕ ವಯಸ್ಸಿನವರನ್ನೂ ಕಾಡುತ್ತಿದೆ.
ಬಿಳಿ ಕೂದಲನ್ನು ಮರೆ ಮಾಚಲು ಕೆಲವರು ಕೆಮಿಕಲ್ ಹೇರ್ ಡೈ ಬಳಸುವರು. ಆದರೆ ಭವಿಷ್ಯದಲ್ಲಿ ಕೂದಲಿನ ಹಲವಾರು ಸಮಸ್ಯೆಗಳಿಗೆ ಇದು ಕಾರಣವಾಗಬಹುದು.
ಅಂಟುವಾಳ ಕಾಯಿಯಲ್ಲಿ ಕೂದಲಿನ ಆರೈಕೆಗೆ ಬೇಕಾದ ಪೋಷಕಾಂಶಗಳು ಹೇರಳವಾಗಿವೆ. ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳಿಗೆ ಅಂಟುವಾಳ ಕಾಯಿ ಪರಿಹಾರ ನೀಡುತ್ತದೆ.
ಅಂಟುವಾಳ ಕಾಯಿಯನ್ನು ನೀರಿನಲ್ಲಿ ನೆನೆಸಿ ಸ್ನಾನದ ಸಮಯದಲ್ಲಿ ಶಾಂಪೂ ಬದಲಿಗೆ ಬಳಸುವುದರಿಂದ ಕೂದಲಿನ ಬುಡದಲ್ಲಿರುವ ತಲೆಹೊಟ್ಟು ಕಡಿಮೆಯಾಗುತ್ತದೆ. ಅಲ್ಲದೇ ಕೂದಲು ವಾರದಲ್ಲೇ ಉದ್ದ ಬೆಳೆಯುವುದು.
ಅಂಟುವಾಳ ಕಾಯಿಯನ್ನು ಒಡೆದು, ಒಣಗಿಸಿ ಪುಡಿ ಮಾಡಿಟ್ಟು ಕೊಳ್ಳಿ. ಅಂಟುವಾಳ ಕಾಯಿ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಬಿಡಿ. ನಂತರ ಸ್ನಾನ ಮಾಡಿ. ಇದರಿಂದ ಬಿಳಿ ಕೂದಲು ಕಪ್ಪಾಗುವುದು