ಹೇರ್ ಡೈ, ಮೆಹೆಂದಿ ಏನೂ ಬೇಡ! ಈ ಎರಡು ವಸ್ತು ಸಾಕು ಬಿಳಿ ಕೂದಲು ಬುಡಸಮೇತ ಕಪ್ಪಾಗುತ್ತೆ
ಮನೆಯಲ್ಲಿ ಎಣ್ಣೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಇದಕ್ಕಾಗಿ 4 - 5 ಆಮ್ಲಾ, 1 ಕಪ್ ಸಾಸಿವೆ ಎಣ್ಣೆ, ½ ಕಪ್ ಅರ್ಗಾನ್ ಆಯಿಲ್ ತೆಗೆದುಕೊಳ್ಳಿ.
ಒಂದು ದೊಡ್ಡ ಪಾತ್ರೆಯಲ್ಲಿ, 1 ಕಪ್ ಸಾಸಿವೆ ಎಣ್ಣೆ, ಅರ್ಧ ಕಪ್ ಅರ್ಗಾನ್ ಆಯಿಲ್ ಮತ್ತು 4-5 ನೆಲ್ಲಿಕಾಯಿ ಹಾಕಿ.
ಈ ಪಾತ್ರೆಯನ್ನು ಗ್ಯಾಸ್ ಮೇಲಿಟ್ಟು, ಸುಮಾರು 1 ಗಂಟೆ ಕುದಿಸಿ. ನಂತರ ಗ್ಯಾಸ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
ಕೂದಲನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ. ಇದರ ನಂತರ, ಕೂದಲಿಗೆ ತುದಿಯಿಂದ ಬೇರಿನವರೆಗೆ ಈ ಎಣ್ಣೆಯನ್ನು ಹಚ್ಚಿ. ನಂತರ ತಲೆಯನ್ನು ನಯವಾಗಿ ಮಸಾಜ್ ಮಾಡಿ. ನಂತರ ಒಮ್ಮೆ ಬಾಚಿಕೊಳ್ಳಿ. ವಾರದಲ್ಲಿ ಎರಡು ಬಾರಿ ಈ ಎಣ್ಣೆಯನ್ನು ಬಳಸಿ.
ಸಾಸಿವೆ ಎಣ್ಣೆಯಲ್ಲಿ ಮೆಲನಿನ್ ಅಂಶವಿದ್ದು, ಬಿಳಿ ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಇದು ತುಂಬಾ ಪ್ರಯೋಜನಕಾರಿ. ಮತ್ತೊಂದೆಡೆ, ಆಮ್ಲಾದಲ್ಲಿ ಕ್ಯಾಲ್ಸಿಯಂ ಕಂಡುಬರುತ್ತದೆ, ಇದು ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಈ ಎರಡರ ಸಂಯೋಜನೆ ಬಿಳಿ ಕೂದಲಿಗೆ ಪರಿಣಾಮಕಾರಿ.
ಸೂಚನೆ: ನಮ್ಮ ಲೇಖನವು ಮಾಹಿತಿಯನ್ನು ಒದಗಿಸಲು ಮಾತ್ರ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞರು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ZEE NEWS ಇದಕ್ಕೆ ಹೊಣೆಯಲ್ಲ.