White hair treatment: ಬಿಳಿ ಕೂದಲನ್ನು 4 ವಾರಗಳಲ್ಲಿ ಶಾಶ್ವತ ಕಪ್ಪಾಗಿಸುವ ಅದ್ಭುತ ಮನೆಮದ್ದು!
ಇತ್ತೀಚಿನ ದಿನಗಳಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆ ತುಂಬಾ ಹೆಚ್ಚಾಗಿದೆ. ಕೂದಲು ಉದುರುವುದು, ನಿರ್ಜೀವ ಮತ್ತು ಬಿಳಿ ಕೂದಲು ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. ಬಿಳಿ ಕೂದಲಿಗೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳಲು ಈ ಮನೆಮದ್ದು ಬಳಸಿ.
ಫ್ಲಕ್ಸ್ ಸೀಡ್ಸ್ ಅಂದರೆ ಅಗಸೆ ಬೀಜಗಳು ಕೂದಲಿಗೆ ತುಂಬಾ ಪ್ರಯೋಜನಕಾರಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಉತ್ಪನ್ನಗಳನ್ನು ಬಳಸುವ ಅಗತ್ಯವಿಲ್ಲ. ಅಗಸೆ ಬೀಜದ ಹೇರ್ ಜೆಲ್ ತಯಾರಿಸಿ ಬಳಸಿದರೆ ಅದ್ಭುತ ರಿಸಲ್ಟ್ ಕಾಣುವಿರಿ.
ಅಗಸೆ ಬೀಜದ ಹೇರ್ ಜೆಲ್ ನಿಯಮಿತವಾಗಿ ಬಳಸುವುದರಿಂದ ಉತ್ತಮ ಪ್ರಯೋಜನಗಳಿವೆ. ಅಗಸೆ ಬೀಜದ ಹೇರ್ ಜೆಲ್ ತಯಾರಿಸಲು 1 ಕಪ್ ಅಗಸೆ ಬೀಜ, 3-4 ಕಪ್ ನೀರು, 3-4 ಆಲಿವ್ ಆಯಿಲ್, 1 ಚಮಚ ತೆಂಗಿನ ಎಣ್ಣೆ ಅಥವಾ ವಿಟಮಿನ್ ಇ ಎಣ್ಣೆ ತೆಗೆದುಕೊಳ್ಳಿ.
ಅಗಸೆ ಬೀಜಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಮೃದುವಾದ ಬಟ್ಟೆಯ ಹಾಕಿ ಗಾಜಿನ ಬಾಟಲಿಯಲ್ಲಿ ಸೋಸಿ ಕೊಳ್ಳಿ. ಈಗ ಒಂದು ಬೌಲ್ ತೆಗೆದುಕೊಂಡು ಅದರಲ್ಲಿ 1-2 ಸ್ಪೂನ್ ಜೆಲ್ ಹಾಕಿ.
ಆಲಿವ್ ಆಯಿಲ್, ವಿಟಮಿನ್ ಇ ಅಥವಾ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. ಈ ಜೆಲ್ ಅನ್ನು 10-15 ದಿನಗಳವರೆಗೆ ಫ್ರಿಜ್‌ನಲ್ಲಿ ಸಂಗ್ರಹಿಸಬಹುದು.
ಬಿಳಿ ಕೂದಲಿಗೆ ಈ ಜೆಲ್ ಬಳಕೆ ಆರೋಗ್ಯಕರ ಪರಿಹಾರ. ಈ ಜೆಲ್ ಕೂದಲಿಗೆ ರಕ್ತ ಪೂರೈಕೆಯನ್ನು ಸುಧಾರಿಸುತ್ತದೆ. ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ. ಬಿಳಿ ಕೂದಲಿನ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಕೂದಲನ್ನು ದಪ್ಪ ಮತ್ತು ಬಲವಾಗಿಸಲು ಸಹಾಯ ಮಾಡುತ್ತದೆ.