ಈ ಕಪ್ಪು ಕಾಳಿನ ಹೇರ್ ಪ್ಯಾಕ್ ಬಿಳಿಕೂದಲನ್ನು ಬುಡಸಮೇತ ಶಾಶ್ವತವಾಗಿ ಕಪ್ಪಾಗಿಸುತ್ತೆ! ಒಮ್ಮೆ ಟ್ರೈ ಮಾಡಿ ರಿಸಲ್ಟ್‌ ಪಕ್ಕಾ

Thu, 24 Oct 2024-8:46 pm,

ಸಾಸಿವೆ ಕಾಳುಗಳಿಂದ ತಯಾರಿಸಿದ ಈ ಪ್ಯಾಕ್‌ ಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮನೆಯಲ್ಲಿ ತಯಾರಿಸಿದ ಹೇರ್‌ ಪ್ಯಾಕ್‌ ಕೂದಲಿಗೆ ರೇಷ್ಮೆಯಂತಹ ಹೊಳಪು ನೀಡಿ. ಬಿಳಿ ಕೂದಲಿನಿಂದ ಹಿಡಿದು ತಲೆಹೊಟ್ಟಿನವರೆಗೆ ಪ್ರತಿಯೊಂದಕ್ಕೂ ಪರಿಹಾರ ನೀಡುತ್ತದೆ. 

ಸಾಸಿವೆ ನೈಸರ್ಗಿಕ ಕೂದಲು ಕಂಡಿಷನರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಸಾಸಿವೆಯಲ್ಲಿನ ಆಂಟಿಫಂಗಲ್ ಗುಣಲಕ್ಷಣಗಳು ತಲೆಹೊಟ್ಟು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ. 

ಒಂದು ಚಮಚ ಸಾಸಿವೆ ಕಾಳುಗಳನ್ನು ಬಾಣಲೆಯ ಮೇಲೆ ಬಿಸಿ ಮಾಡಿ. ನಂತರ ಅದನ್ನು ರುಬ್ಬಿಕೊಳ್ಳಿ. ಇದಕ್ಕೆ ಬಾದಾಮಿ ಎಣ್ಣೆ ಹಾಕಿ, ಸ್ವಲ್ಪ ಅಲೋವೆರಾ ಸೇರಿಸಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ. ಇದಕ್ಕೆ ಒಂದು ಮೊಟ್ಟೆಯನ್ನು ಸೇರಿಸಿ.   

ಸಾಸಿವೆ ಹೇರ್‌ ಪ್ಯಾಕ್ ಅನ್ನು ಕೂದಲಿಗೆ ಬೇರುಗಳಿಂದ ತುದಿವರೆಗೆ ಅನ್ವಯಿಸಿ. ಕನಿಷ್ಠ 30-40 ನಿಮಿಷಗಳ ಕಾಲ ಬಿಡಿ. ಉಗುರು ಬೆಚ್ಚಗಿನ ನೀರು ಮತ್ತು ಶಾಂಪೂ ಬಳಸಿ ತೊಳೆಯಿರಿ. 

ಸಾಸಿವೆ ಕಾಳುಗಳು ತಲೆಹೊಟ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೂದಲು ಉದುರುವಿಕೆಯ‌ ಸಮಸ್ಯೆಯಿರುವವರು ಸಹ ಸಾಸಿವೆ ಕಾಳಿನ ಹೇರ್‌ ಪ್ಯಾಕ್ ಬಳಸಬಹುದು. ಇದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. 

ಸಾಸಿವೆಯ ಈ ಹೇರ್ ಪ್ಯಾಕ್ ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸುವುದು. ಕಾಲಜನ್ ಅನ್ನು ಹೆಚ್ಚಿಸುತ್ತದೆ ಮತ್ತು ಕೂದಲಿನ ಬಣ್ಣವನ್ನು ಸುಧಾರಿಸುತ್ತದೆ. ಹೊಸ ಕಪ್ಪು ಕೂದಲು ಬೆಳೆಯಲು ಸಾಸಿವೆಯ ಹೇರ್ ಪ್ಯಾಕ್ ಸಹಾಯ ಮಾಡುತ್ತದೆ. 

ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link