ಬಿಳಿ ಕೂದಲನ್ನು ಬುಡದಿಂದ ಕಪ್ಪಾಗಿಸಿ ಉದ್ದ ಕೂದಲನ್ನು ಪಡೆಯಲು ಈ ಒಂದು ತರಕಾರಿಯೇ ಸಾಕು..!
ಒತ್ತಡ ಭರಿತ ಜೀವನಶೈಲಿಯಿಂದಾಗಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಕೂದಲು ಉದುರುವಿಕೆ ಸಮಸ್ಯೆಯೂ ಅಧಿಕವಾಗುತ್ತದೆ.
ಭಾರತೀಯ ಅಡುಗೆ ಮನೆಗಳಲ್ಲಿ ಸುಲಭವಾಗಿ ಲಭ್ಯವಿರುವ ಒಂದು ತರಕಾರಿ ಸಮಸ್ಯೆಯಿಂದ ಕೂದಲಿನ ಸರ್ವ ಸಮಸ್ಯೆಗೂ ಸುಲಭ ಪರಿಹಾರ ಪಡೆಯಬಹುದು.
ಈರುಳ್ಳಿಯಲ್ಲಿ ಸಲ್ಫರ್, ಆಂಟಿಮೈಕ್ರೋಬಿಯಲ್, ಆಂಟಿಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿರುವುದರಿಂದ ಇದು ಕೂದಲಿನ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.
ಕೊಬ್ಬರಿ ಎಣ್ಣೆಯಲ್ಲಿ ಈರುಳ್ಳಿ ರಸ ಬೆರೆಸಿ ಹಚ್ಚುವುದರಿಂದ ಕೂದಲುದುರುವಿಕೆ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಜೊತೆಗೆ, ಬೋಳು ತಲೆಯಲ್ಲೂ ಹೊಸ ಕೂದಲು ಹುಟ್ಟುತ್ತದೆ.
ಸಿಪ್ಪೆ ಸಹಿತವಾಗಿ ಈರುಳ್ಳಿಯನ್ನು ರುಬ್ಬಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಒಂದು ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ಇದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.