ಎಳ್ಳೆಣ್ಣೆಗೆ ಈ ಪುಡಿ ಬೆರೆಸಿ ತಲೆಗೆ ಹಚ್ಚಿ: ಬಿಳಿ ಕೂದಲು ಗಾಢ ಕಪ್ಪಾಗಿ ಮೊಣಕಾಲುದ್ದ ಬೆಳೆದು ರೇಷ್ಮೆಯಂತೆ ಹೊಳೆಯುತ್ತೆ !
ತೆಂಗಿನ ಎಣ್ಣೆ ಹಾಗೆಯೇ ಎಳ್ಳೆಣ್ಣೆಯು ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ. ಎಳ್ಳೆಣ್ಣೆಯು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.
ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಎಳ್ಳೆಣ್ಣೆಯನ್ನು ಕೆಲವು ವಸ್ತುಗಳೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು. ಇದರಿಂದ ಕೂದಲು ಮೊಣಕಾಲುದ್ದ ಬೆಳೆದು, ರೇಷ್ಮೆಯಂತೆ ಹೊಳೆಯುತ್ತದೆ.
ಗೋರಂಟಿ ಅಥವಾ ಮೆಹೆಂದಿ ಎಲೆಗಳನ್ನು ಒಣಗಿಸಿ ಪುಡಿಮಾಡಿ. ಈಗ ಒಂದು ಕಪ್ ಎಳ್ಳೆಣ್ಣೆಯನ್ನು ಬಿಸಿ ಮಾಡಿ. ಬಿಸಿ ಎಣ್ಣೆಯಲ್ಲಿ ಒಂದು ಚಮಚ ಗೋರಂಟಿ ಎಲೆಯ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು ಮಸಾಜ್ ಮಾಡಿ. ರಾತ್ರಿಯಿಡೀ ಬಿಡಿ. ಬೆಳಗ್ಗೆ ಎದ್ದ ಬಳಿಕ ತಲೆಸ್ನಾನ ಮಾಡಿ.
ಕೂದಲು ಕಪ್ಪಾಗಲು ಗೋರಂಟಿ ಬದಲು ಕರಿಬೇವಿನ ಎಲೆಯನ್ನು ಸಹ ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಚ್ಚಬಹುದು. ಕೂದಲು ಉದುರುವಿಕೆಯನ್ನು ತಡೆಯಲು, ಅವುಗಳನ್ನು ಬಲಪಡಿಸಲುಇದು ಸಹಾಯ ಮಾಡುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.