ಬೆಳ್ಳಗಾದ ಕೂದಲು ಮರಳಿ ಕಪ್ಪಗಾಗಲು ನಿಂಬೆ ಹಣ್ಣನ್ನು ಇದರೊಟ್ಟಿಗೆ ಕುದಿಸಿ ಕುಡಿಯಿರಿ ಸಾಕು!
ನಿಂಬೆ ರಸವನ್ನು ಆಹಾರಕ್ಕೆ ಸೇರಿಸುವುದರಿಂದ ಅದರ ರುಚಿ ಹೆಚ್ಚಾಗುವುದರ ಜೊತೆಗೆ, ಆರೋಗ್ಯಕ್ಕೂ ತುಂಬಾ ಒಳ್ಳೆಯದು.
ನಿಂಬೆಹಣ್ಣು ನಮ್ಮ ದೇಹದ ಕೆಲವು ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರವಾಗಿದೆ.
ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ನಿಂಬೆ ಹಣ್ಣನ್ನು ಕುದಿಸಿದ ನೀರು ಕುಡಿಯುವುದರಿಂದ ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಮೊದಲು ಪಾತ್ರೆಯಲ್ಲಿ ನೀರು ಇಟ್ಟು, ಬಿಸಿಯಾದ ನಂತರ ನಿಂಬೆ ಹಣ್ಣನ್ನು ಕಟ್ ಮಾಡಿ ಹಾಕಿ. ಇದಕ್ಕೆ ಶುಂಠಿ, ಬೆಳ್ಳುಳ್ಳಿ, ಲವಂಗವನ್ನು ಸೇರಿಸಿ. 10 ನಿಮಿಷಗಳ ಕಾಲ ಕುದಿಸಿ.
ಈ ನೀರನ್ನು ಫಿಲ್ಟರ್ ಮಾಡಿ ಒಂದು ಚಮಚ ಜೇನುತುಪ್ಪ ಹಾಕೊಕೊಂಡು ಬೆಳಿಗ್ಗೆ ಸೇವಿಸುವುದರಿಂದ ಕೂದಲು ಕಪ್ಪಾಗುವುದಲ್ಲದೇ ದಪ್ಪ ಉದ್ದವಾಗಿ ಬೆಳೆಯುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.