ಹೂವಿನೊಂದಿಗೆ ಈ ಸೊಪ್ಪನ್ನು ಅರೆದು ಕೂದಲಿಗೆ ಹಚ್ಚಿದ್ರೆ ಬಿಳಿ ಕೂದಲು ಗಾಢ ಕಪ್ಪಾಗಿ ಫಳ ಫಳ ಹೊಳೆಯುತ್ತೆ..!
ಬಿಳಿ ಕೂದಲಿಗೆ ಹೇರ್ ಡೈ, ಇಲ್ಲವೇ ಮಾರುಕಟ್ಟೆಯಲ್ಲಿ ದೊರೆಯುವ ರೆಡಿಮೆಡ್ ಹೆನ್ನಾ ಪೌಡರ್ ಬದಲಿಗೆ ಮೆಹಂದಿ ಸೊಪ್ಪು ತುಂಬಾ ಲಾಭದಾಯಕವಾಗಿದೆ.
ಮೆಹಂದಿ ಸೊಪ್ಪನ್ನು ಬಳಸುವುದರಿಂದ ಡ್ಯಾಂಡ್ರಫ್ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ನೀಡುವ ಮೆಹಂದಿ ಸೊಪ್ಪು ಕೂದಲ ಬೆಳವಣಿಗೆಗೆ ಸಹಕಾರಿ ಆಗಿದೆ. ಇದು ಕೂದಲಿಗೆ ಅತ್ಯುತ್ತಮ ಕಂಡೀಷನರ್ ಕೂಡ ಹೌದು.
ಬಿಳಿ ಕೂದಲಿನೊಂದಿಗೆ ಮೆಹಂದಿ ಸೊಪ್ಪಿನೊಂದಿಗೆ ಬಿಳಿ ದಾಸವಾಳದ ಹೂವನ್ನು ಬಳಸುವುದು ಹೆಚ್ಚು ಲಾಭದಾಯಕವಾಗಿದೆ.
ಬಿಳಿ ದಾಸವಾಳದ ಹೂವಿನಲ್ಲಿ ಫ್ಲೇವನಾಯ್ಡ್ಸ್, ಆಂಟಿ ಆಕ್ಸಿಡೆಂಟ್‌ಗಳು ಸಮೃದ್ಧವಾಗಿದ್ದು ಇದು ಕೂದಲಿಗೆ ಗಾಢ ಕಪ್ಪು ಬಣ್ಣ ನೀಡುವುದರ ಜೊತೆಗೆ ಕೂದಲ ಬೆಳವಣಿಗೆಯಲ್ಲೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಒಂದು ಹಿಡಿ ತೊಳೆದ ಮೆಹಂದಿ ಸೊಪ್ಪಿನೊಂದಿಗೆ ಒಂದೆರಡು ಬಿಳಿ ದಾಸವಳದ ಹೂವನ್ನು ಹಾಕಿ ಚೆನ್ನಾಗಿ ರುಬ್ಬಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ಒಂದೆರಡು ಗಂಟೆ ಒಣಗಲು ಬಿಡಿ.
ಹೇರ್ ಪ್ಯಾಕ್ ಅನ್ವಯಿಸಿ ಒಂದೆರಡು ಗಂಟೆಗಳ ಬಳಿಕ ಸೌಮ್ಯ ಶಾಂಪೂವಿನೊಂದಿಗೆ ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿದರೆ ಕೆಲವೇ ದಿನಗಳಲ್ಲಿ ಗಾಢ ಕಪ್ಪಾದ ಉದ್ದ ಕೂದಲು ನಿಮ್ಮದಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.