ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಹೊಡೆದ ಆಟಗಾರ ಯಾರು ಗೊತ್ತಾ? 99 ರಷ್ಟು ಮಂದಿಗೆ ಇದಕ್ಕೆ ಉತ್ತರವೇ ಗೊತ್ತಿಲ್ಲ!
ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ನೋಡಲು ಕಾರಣ ಅಲ್ಲಿರುವ ಭರ್ಜರಿ ಬೌಂಡರಿ ಮತ್ತು ಸಿಕ್ಸರ್’ಗಳ ಕ್ರೇಜ್. ತ್ವರಿತ ಕ್ರಿಕೆಟ್’ನ ಈ ಯುಗದಲ್ಲಿ, ಅಭಿಮಾನಿಗಳು ಇವನ್ನೇ ಪೂರ್ಣವಾಗಿ ಆನಂದಿಸುತ್ತಾರೆ.
ಅಂದಹಾಗೆ ನಾವಿಂದು ಈ ವರದಿಯಲ್ಲಿ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಸಿಕ್ಸರ್ ಹೊಡೆದ ಆಟಗಾರ ಯಾರು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವಿಶ್ವ ಕ್ರಿಕೆಟ್’ನಲ್ಲಿ ಮೊದಲ ಸಿಕ್ಸರ್ ಬಾರಿಸಿದ ಆಟಗಾರನ ಕುರಿತು ಮಾತನಾಡುವುದಾದರೆ, ಆಸ್ಟ್ರೇಲಿಯಾದ ದಂತಕಥೆ ಹೆಸರಿನಲ್ಲಿ ಈ ವಿಶೇಷ ಸಾಧನೆ ದಾಖಲಾಗಿದೆ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಜೋ ಡಾರ್ಲಿಂಗ್ ಈ ಸಾಧನೆ ಮಾಡಿದವರಲ್ಲಿ ಮೊದಲಿಗರು. 1898 ರಲ್ಲಿ ಅಡಿಲೇಡ್ ಓವಲ್‌ನಲ್ಲಿ ಡಾರ್ಲಿಂಗ್ ಈ ಸಾಧನೆಯನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದರು.
ಆಗ ಸಿಕ್ಸರ್ ಹೊಡೆಯುವ ನಿಯಮವೇ ಬೇರೆ ಇತ್ತು. ಇಂದಿನಂತೆ, ಚೆಂಡನ್ನು ಬೌಂಡರಿ ಗೆರೆಯಿಂದ ಹೊರಗೆ ಕಳುಹಿಸಿದರೆ 6 ರನ್ ಸಿಗುತ್ತಿರಲಿಲ್ಲ. ಬದಲಾಗಿ 5 ರನ್ ಸಿಗುತ್ತಿತ್ತು.
ಒಂದು ವೇಳೆ ಚೆಂಡು ಕ್ರೀಡಾಂಗಣ ದಾಟಿ ಹೊರ ಹೋದರೆ ಬ್ಯಾಟ್ಸ್ ಮನ್ ಖಾತೆಗೆ 6 ರನ್ ಸೇರ್ಪಡೆಯಾಗುತ್ತಿತ್ತು. ಆದರೆ, ಈ ಅದ್ಭುತವನ್ನು 14 ನವೆಂಬರ್ 1898 ರಂದು ಜೋ ಡಾರ್ಲಿಂಗ್ ಮಾಡಿದರು. ಅಡಿಲೇಡ್ ಓವಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ಕ್ರೀಡಾಂಗಣದಿಂದಲೇ ಬಾಲ್ ಹೊರಹೋಗುವಂತೆ ಮಾಡಿದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಸಿಕ್ಸರ್ ಆಗಿದೆ.