Pavithra gowda: ನಟಿ ಪವಿತ್ರಾ ಗೌಡ ಯಾರು, ದರ್ಶನ್ ಜೊತೆ ಈ ಪ್ರೀತಿ ಪ್ರೇಮ ಶುರುವಾಗಿದ್ದು ಎಲ್ಲಿ?
ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
10 ವರ್ಷಗಳ ರಿಲೇಷನ್‌ಶಿಪ್. ಥ್ಯಾಂಕ್ ಯು ಎಂದು ಪವಿತ್ರಾ ಗೌಡ ಬರೆದು ಹಾಕಿರುವ ಆ ಪೋಸ್ಟ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಕೋಪಕ್ಕೂ ಕಾರಣವಾಗಿದೆ.
ಪವಿತ್ರಾ ಗೌಡ ಯಾರು ಎಂಬುದು ಹಲವರಲ್ಲಿ ಮೂಡಿದ ಪ್ರಶ್ನೆ. ಇವರು ನಟನೆ ಜೊತೆ ಮಾಡಲಿಂಗ್ ಮಾಡುತ್ತಾರೆ. ಕನ್ನಡದ ಛತ್ರಿಗಳು ಸಾರ್ ಛತ್ರಿಗಳು, ಅಗಮ್ಯಾ, ಸಾಗುವ ದಾರಿ, 54321 ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಪ್ರೀತಿ ಕಿತಾಬು ಸಿನಿಮಾ ನಟಿ ಪವಿತ್ರಾ ಗೌಡಗೆ ಖ್ಯಾತಿ ತಂದುಕೊಟ್ಟ ಚಿತ್ರ. ಸದ್ಯ ಪವಿತ್ರಾ ಗೌಡ ಫ್ಯಾಷನ್ ಡಿಸೈನರ್ ಆಗಿದ್ದು ಬೋಟಿಕ್ ನಡೆಸುತ್ತಿದ್ದಾರೆ.
ಕನ್ನಡ ಚಿತ್ರರಂಗ ಸ್ಟಾರ್ ನಟಿಯರು ಹಾಗೂ ಜನ ಸಾಮಾನ್ಯರಿಗೆ ತಮ್ಮ ಡಿಸೈನರ್ ಉಡುಪುಗಳನ್ನು ನಟಿ ಪವಿತ್ರಾ ಗೌಡ ಮಾರಾಟ ಮಾಡುತ್ತಾರೆ.
ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ನಾನು ಅವರ ಬಾಳಲ್ಲಿ ಬರುವುದಕ್ಕೂ ಮುನ್ನ ಅವರಿಬ್ಬರ ಬಗ್ಗೆ ಇರುವ ಸಮಸ್ಯೆ ಬಗ್ಗೆ ನಿಮಗೆಲ್ಲರಿಗೂ ಗೊತ್ತು ಎಂದು ಭಾವಿಸಿದ್ದೇನೆ ಎಂದು ಪವಿತ್ರ ಗೌಡ ಅವರು ದರ್ಶಬ್ ಪತ್ನಿ ಮಾಡಿರುವ ಪೋಸ್ಟ್ ಗೆ ತಿರುಗೇಟು ನೀಡಿದ್ದಾರೆ.
ನಾನು ಹಾಗೂ ದರ್ಶನ್ ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ. ಈ ವಿಷಯ ವಿಜಯಲಕ್ಷ್ಮಿ ಅವರಿಗೂ ಮೊದಲೇ ತಿಳಿದಿತ್ತು. ಈ ವಿಚಾರವಾಗಿ ವಿಜಯಲಕ್ಷ್ಮಿ ನನಗೆ ಹಲವಾರು ಬಾರಿ ಕರೆ ಮಾಡಿ ಮಾತನಾಡಿದ್ದರು. ವಿಜಯಲಕ್ಷ್ಮಿರವರಿಗೆ ಯಾವುದೇ ಸಮಸ್ಯೆ ಇಲ್ಲವೆಂದು ಹೇಳಿದ್ದರು ಎಂದು ಪವಿತ್ರ ಗೌಡ ಬರೆದಿದ್ದಾರೆ.
ಈ ಪೋಸ್ಟ್ ಓದಿದವರಿಗೆ ಅರ್ಥವಾದ ಮಾತೆಂದರೆ ವಿಜಯಲಕ್ಷ್ಮಿ ಜೊತೆ ಮನಸ್ತಾಪ ಶುರುವಾದ ಆ ದಿನಗಳಲ್ಲಿ ದರ್ಶನ್ ಅವರಿಗೆ ಪವಿತ್ರ ಗೌಡ ಹತ್ತಿರವಾದರು ಎನ್ನಲಾಗ್ತಿದೆ.