ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಸೊಸೆ ಟಾಪ್ ಹೀರೋಯಿನ್…ಸಿನಿರಂಗವನ್ನೇ ಆಳುತ್ತಿರುವ ಈ ಸುಂದರಿ ಯಾರು ಗೊತ್ತಾ?
ರಾಹುಲ್ ಶರದ್ ದ್ರಾವಿಡ್ ಇವರು ಪೂರ್ಣ ನಾಮ. ಕ್ರಿಕೆಟ್ತರಬೇತುದಾರ ಮತ್ತು ಭಾರತೀಯ ರಾಷ್ಟ್ರೀಯ ತಂಡದ ಮಾಜಿ ನಾಯಕ, ಕೂಡ ಹೌದು. ಪ್ರಸ್ತುತ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿರಿಯ ಪುರುಷರ ರಾಷ್ಟ್ರೀಯ ತಂಡಕ್ಕೆ ನೇಮಕಗೊಳ್ಳುವ ಮೊದಲು, ದ್ರಾವಿಡ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA)ಕ್ರಿಕೆಟ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸಿದ್ದರು.
ದ್ರಾವಿಡ್ ಹುಟ್ಟಿದ್ದು ಮರಾಠಿ ಕುಟುಂಬದಲ್ಲಿ… ಬೆಳೆದಿದ್ದು ಬೆಂಗಳೂರಿನಲ್ಲಿ. 12 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ದ್ರಾವಿಡ್, ನಂತರ ಕರ್ನಾಟಕವನ್ನು ಅಂಡರ್-15, ಅಂಡರ್-17 ಮತ್ತು ಅಂಡರ್-19 ಹಂತಗಳಲ್ಲಿ ಪ್ರತಿನಿಧಿಸಿದರು. 2000ನೇ ಇಸವಿಯಲ್ಲಿ ವಿಸ್ಡನ್ ಕ್ರಿಕೆಟರ್ಸ್ ಅಲ್ಮಾನಾಕ್’ನಿಂದ ವರ್ಷದ ಅತ್ಯುತ್ತಮ ಐದು ಕ್ರಿಕೆಟಿಗರಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟಿದ್ದರು ದ್ರಾವಿಡ್.
ಅಂದಹಾಗೆ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರ ಸೊಸೆ ಉದಯೋನ್ಮುಖ ನಟಿ. ಅವರ ಬಗ್ಗೆ ನಾವಿಂದು ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಅದಿತಿ ದ್ರಾವಿಡ್ ಮರಾಠಿ ಮನರಂಜನಾ ಉದ್ಯಮದಲ್ಲಿ ಜನಪ್ರಿಯ ನಟಿ. ಇಲ್ಲಿಯವರೆಗೆ ಹಲವು ಧಾರವಾಹಿ, ಸಿನಿಮಾಗಳಲ್ಲಿ ಬಣ್ಣಹಚ್ಚುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾಳೆ. 'ಸುಂದರ ಮನನ ಭಾರ್ಲಿ', ‘ಮಾಜ್ಯಾ ನವ್ರ್ಯಾಚಿ ಬಾಯ್ಕೊ’ ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಗೋಷ್ಟಾ ಏಕ ಪೈತ್ನಿಚಿ’ಯಲ್ಲೂ ಪ್ರಮುಖ ಪಾತ್ರ ನಿರ್ವಹಿಸಿರುವ ಅದಿತಿ, ನರ್ತಕಿ ಮತ್ತು ಗೀತರಚನೆಕಾರ್ತಿ ಕೂಡ ಹೌದು.
ಒಂದೊಮ್ಮೆ ರಾಹುಲ್ ದ್ರಾವಿಡ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ಅದಿತಿ ದ್ರಾವಿಡ್, "ರಾಹುಲ್ ದ್ರಾವಿಡ್ ನನ್ನ ಅಂಕಲ್. ಕಳೆದ 30-35 ವರ್ಷಗಳಿಂದ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ನನ್ನ ತಂದೆ ವಿನಾಯಕ್ ದ್ರಾವಿಡ್ ರಣಜಿ ಟ್ರೋಫಿ ಆಟಗಾರ. ಕ್ರಿಕೆಟ್’ನಿಂದ ನಮ್ಮ ಸಂಬಂಧ ತುಂಬಾ ಬಿಗಿಯಾಯಿತು” ಎಂದಿದ್ದರು.