ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಅಕ್ಕ ದೇಶದ ಪ್ರಖ್ಯಾತ ಉದ್ಯಮಿ: ಯಾರು ಗೊತ್ತಾ ಆ ಚೆಲುವೆ?
ಈ ವರದಿಯಲ್ಲಿ ವಿರಾಟ್ ಕೊಹ್ಲಿ ಅವರ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಬಗ್ಗೆ ಕೊಂಚ ಮಾಹಿತಿಯನ್ನು ನೀಡಲಿದ್ದೇವೆ. ಮೂವರು ಒಡಹುಟ್ಟಿದವರಲ್ಲಿ ಭಾವನಾ ಕೊಹ್ಲಿ ಧಿಂಗ್ರಾ ಹಿರಿಯರು ಮತ್ತು ವಿರಾಟ್ ಕೊಹ್ಲಿ ಕಿರಿಯರು. ವಿರಾಟ್ ಮತ್ತು ಭಾವನಾಗೆ ಒಬ್ಬ ಸಹೋದರನಿದ್ದು ಅವರ ಹೆಸರು ವಿಕಾಸ್ ಕೊಹ್ಲಿ.
ಭಾವನಾ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೊತೆ ಉತ್ತಮ ಸಂಪರ್ಕ ಹೊಂದಿದ್ದಾರೆ.
ಭಾವನಾ ಕೆಲ ವರ್ಷಗಳ ಹಿಂದೆ ಉದ್ಯಮಿ ಸಂಜಯ್ ಧಿಂಗ್ರಾ ಎಂಬವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರ ಹೆಸರು ಮೆಹಕ್ ಮತ್ತು ಆಯುಷ್.
ಭಾವನಾ ಕೊಹ್ಲಿ ಧಿಂಗ್ರಾ ಹಂಸರಾಜ್ ಮಾದರಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿ, ನಂತರ ದೆಹಲಿ ವಿಶ್ವವಿದ್ಯಾಲಯದ ದೌಲತ್ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಅವರ ಪತಿ ಸಂಜಯ್ ಧಿಂಗ್ರಾ ಉದ್ಯಮಿ ಮತ್ತು ಭಾವನಾ ಕೂಡ ಸ್ವಂತ ಉದ್ದಿಮೆ ನಡೆಸುತ್ತಿದ್ದಾರೆ.
ಭಾವನಾ ಅವರು, ವಿರಾಟ್ ಕೊಹ್ಲಿಯ ಫ್ಯಾಷನ್ ಲೇಬಲ್ One8Selectನ ಪಾರ್ಟನರ್ ಕೂಡ ಹೌದು. ವಿರಾಟ್ ಕೊಹ್ಲಿ ಅವರ ಸಹೋದರಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ 1.8 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್’ಗಳನ್ನು ಹೊಂದಿದ್ದಾರೆ.
ಕಳೆದ ವರ್ಷ ವಿರಾಟ್ ಕೊಹ್ಲಿ ಅವರ ಜನ್ಮದಿನದಂದು, ಭಾವನಾ ತಮ್ಮ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದರು. ಇದಕ್ಕೆ ವಿರಾಟ್ ಕೂಡ ಪ್ರೀತಿಯ ಪ್ರತಿಕ್ರಿಯೆ ನೀಡಿದ್ದರು.