Yuva Rajkumar Wife: ಯುವರಾಜ್ ಕುಮಾರ್ ಪತ್ನಿ ಶ್ರೀದೇವಿ ಯಾರು.? ಇವರ ಹಿನ್ನಲೆ ಏನು.?

Mon, 10 Jun 2024-3:24 pm,

ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದಲ್ಲಿ ಚೆಂದನ್‌ ಶೆಟ್ಟಿ ನಿವೇದಿತಾ ಗೌಡ ವಿಚ್ಚೇದನದ ಸುದ್ದಿ ಸಂಚಲನ ಸೃಷ್ಟಿಸಿತ್ತು.. ಇದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್‌ ಸುದ್ದಿ ಹೊರಬಿದ್ದಿದ್ದು, ಸ್ಯಾಂಡಲ್‌ವುಡ್‌ ನಟ ಯುವರಾಜ್‌ಕುಮಾರ್‌ ಹಾಗೂ ಪತ್ನಿ ಶ್ರೀದೇವಿ ಅವರ ಬಾಳಲ್ಲಿ ಬಿರುಕುಂಟಾಗಿ.. ಇಬ್ಬರೂ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ..   

ಇದೇ ವೇಳೆ ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಯಾರು ಅವರ ಹಿನ್ನಲೆ ಏನು ಎನ್ನುವುದರ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಗಳು ಹೊರಬಿದ್ದಿವೆ.. ಈ ಬಗೆಗಿನ ಸಂಪೂರ್ಣ ಡಿಟೇಲ್ಸ್‌ ಇಲ್ಲಿದೆ..   

ಮೂಲತಃ ಮೈಸೂರಿನವರಾದ ಶ್ರೀದೇವಿ ಭೈರಪ್ಪ ಅಲ್ಲಿಯೇ ಹುಟ್ಟಿ ಬೆಳೆದು ಉನ್ನತ ಶಿಕ್ಷಣ ಮುಗಿಸಿದ್ದಾರೆ.. ಯುವ ಅವರನ್ನು ಮದುವೆಯಾಗುದಕ್ಕಿಂತ ಏಳು ವರ್ಷ ಮುಂಚೆಯಿಂದಲೇ ಇಬ್ಬರ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು.. ಪ್ರೀತಿಗೆ ಉಭಯ ಕುಟುಂಬಗಳ ಒಪ್ಪಿಗೆ ಪಡೆದು ಸಪ್ತಪದಿ ತುಳಿದಿದ್ದರು..   

ಯುವನ ಸ್ನೇಹಿತೆಯಾಗಿ ಬಹುಬೇಗ ದೊಡ್ಮನೆಯ ಪ್ರೀತಿ, ನಂಬಿಕೆ ಗಳಿಸಿದ ಶ್ರೀದೇವಿ ಡಾ. ರಾಜ್‌ಕುಮಾರ್‌ ಅವರ ಕುಟುಂಬದ ಒಡೆತನದ  'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ..   

ಸದ್ಯ ಕಳೆದ ಆರೇಳು ತಿಂಗಳಿಂದ ರಾಜ್‌ಕುಟುಂಬದಿಂದ ದೂರವಿರುವ ಯುವ ಪತ್ನಿ ಶ್ರೀದೇವಿ ಬೈರಪ್ಪ ವಿದೇಶದಲ್ಲಿದ್ದಾರೆ ಎನ್ನಲಾಗುತ್ತಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link