ಕಿಚ್ಚ ಸುದೀಪ್ ಅವರ ಅಕ್ಕ ಯಾರು ಗೊತ್ತಾ? ಇವರ ಪುತ್ರ ಕನ್ನಡ ಸಿನಿರಂಗನ ಖ್ಯಾತ ನಟ.. ಕಿಚ್ಚನ ಸಿನಿಮಾದಲ್ಲೇ ಕಾಣಿಸಿಕೊಂಡಿದ್ರು ಈ ಹ್ಯಾಂಡ್‌ಸಂ
ಇತ್ತೀಚಿನ ದಿನಗಳಲ್ಲಿ ಕಿಚ್ಚ ಸುದೀಪ್ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಇದಕ್ಕೆ ಕಾರಣ, ಬಿಗ್ ಬಾಸ್ ತೊರೆಯುವ ಬಗ್ಗೆ ಹೇಳಿಕೆ ನೀಡಿರುವುದು. ಕಳೆದ ಒಂದೆರಡು ದಿನಗಳ ಹಿಂದಷ್ಟೇ, ಇದು ನನ್ನ ಕೊನೆಯ ಸೀಸನ್ ಎಂದು ಪೋಸ್ಟ್ ಶೇರ್ ಮಾಡುವ ಮೂಲಕ ಇನ್ಮುಂದೆ ಬಿಗ್ ಬಾಸ್ ಶೋ ನಾನು ಹೋಸ್ಟ್ ಮಾಡುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು
ಇದೇ ಕಾರಣದಿಂದ ಕಿಚ್ಚನ ಕುರಿತಾಗಿ ಅನೇಕ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ. ಕೆಲವರು ಕಿಚ್ಚ ಬಿಗ್ ಬಾಸ್ ತೊರೆಯಲು ಕೆಲ ಮನಸ್ತಾಪಗಳೇ ಕಾರಣ ಎಂದು ಹೇಳಿಕೊಂಡಿದ್ದರು. ಆದರೆ ಇದೀಗ ಸ್ವತಃ ಅವರೇ ಮತ್ತೊಂದು ಪೋಸ್ಟ್ ಶೇರ್ ಮಾಡಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷನೆ ನೀಡಿದ್ದಾರೆ.
"ನನ್ನ ಟ್ವೀಟ್ ಬಗ್ಗೆ ನನ್ನ ರೀತಿಯಲ್ಲೇ ಆಲೋಚಿಸಿರುವ ಎಲ್ಲರಿಗೂ ನನ್ನ ಪ್ರಶಂಸೆಗಳು. ಚಾನೆಲ್ ಮತ್ತು ನನ್ನ ನಡುವೆ ಮನಸ್ತಾಪ ಉಂಟಾಗಿದೆ ಎಂದು ಊಹೆಗಳನ್ನು ಮಾಡಿ ಕಾಮೆಂಟ್ ಮತ್ತು ವೀಡಿಯೊಗಳನ್ನು ಪ್ರಸಾರ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇಬೆ. ನಾವು ಸುದೀರ್ಘ ಮತ್ತು ಸಕಾರಾತ್ಮಕ ಪ್ರಯಾಣವನ್ನು ಹಂಚಿಕೊಂಡಿದ್ದೇವೆ. ಆ ಪ್ರಯಾಣವನ್ನು "ಅಗೌರವ" ಎಂಬ ಪದದೊಂದಿಗೆ ಸೇರಿಸಬಾರದು. ನನ್ನ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ಕಲರ್ಸ್ ವಾಹಿನಿ ಜೊತೆ ನನ್ನ ಸಂಬಂಧ ಅದ್ಭುತವಾಗಿದ್ದು, ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ನನಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ.
ಒಟ್ಟಾರೆಯಾಗಿ ಬಿಗ್ ಬಾಸ್ ತೊರೆಯುವ ವಿಚಾರ ಸ್ಪಷ್ಟವಾಗಿದ್ದೇ ತಡ, ಇಲ್ಲಸಲ್ಲದ ಊಹೆಗಳು ಎಲ್ಲೆಡೆ ಹರಿದಾಡತೊಡಗಿದ್ದವು. ಆದರೆ ಇದೀಗ ಸುದೀಪ್ ಅವರೇ ಈ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಅಂದಹಾಗೆ ನಾವಿಂದು ಈ ವರದಿಯಲ್ಲಿ ಕಿಚ್ಚ ಸುದೀಪ್ ಅಕ್ಕ ಯಾರು? ಅವರ ಮಗ ಯಾರು? ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಿದ್ದೇಚೆ.
ಕಿಚ್ಚ ಸುದೀಪ್ ಅವರಿಗೆ ಇಬ್ಬರು ಸಹೋದರಿಯರು. ಒಬ್ಬರ ಹೆಸರು ಸುರೇಖಾ. ಮತ್ತೊಬ್ಬರ ಹೆಸರು ಸುಜಾತಾ. ಇಬ್ಬರು ಅಕ್ಕಂದಿರ ಮುದ್ದಿನ ಸಹೋದರು ಸುದೀಪ್. ಇನ್ನು ಸುದೀಪ್ ಅವರಿಗೂ ಅಷ್ಟೇ ಅಕ್ಕಂದಿರು ಎಂದರೆ ಎಲ್ಲಿಲ್ಲದ ಅಕ್ಕರೆ. ಇನ್ನು ಸುಜಾತಾ ಸಂಜೀವ್ ಅವರ ಪುತ್ರ ಸಂಚಿತ್ ಸಂಜೀವ್ ಉದಯೋನ್ಮುಖ ನಟ ಮತ್ತು ನಿರ್ದೇಶಕ.
ಮುಂಬೈನಲ್ಲಿ ನಟನೆ ಮತ್ತು ನಿರ್ದೇಶನ ಸೇರಿ ಸಿನಿಮಾ ತರಬೇತಿ ಪಡೆದಿರುವ ಸಂಚಿತ್, ವಿ ಆರ್ ದಿ ಸೇಮ್, ಒಂದಾನೊಂದು ದಿನ ಎಂಬ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಸುದೀಪ್ ಅಭಿನಯದ ಅಂಬಿ ನಿಂಗ್ ವಯಸ್ಸಾಯ್ತೋ, ವಿಕ್ರಾಂತ್ ರೋಣ ಮತ್ತು ರನ್ನ ಸಿನಿಮಾಗಳಲ್ಲಿ ತಾಂತ್ರಿಕ ವಿಭಾಗಗಳಲ್ಲಿ ಕೂಡ ಕೆಲಸ ಮಾಡಿ ಸಿನಿಮಾ ಬಗ್ಗೆ ತಿಳಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಂಚಿತ್ ಅವರು ʼಜಿಮ್ಮಿʼ ಎಂಬ ಚಿತ್ರವನ್ನು ನಿರ್ದೇಶಿಸಿ ನಟಿಸಿದ್ದಾರೆ.