Guess Who: ಮೊಗ್ಗಿನ ಜಡೆಯಲ್ಲಿ ಮುದ್ದಾಗಿರೋ ಈಕೆ ಯಾರು? ಕ್ಲೂ -‘ಕನ್ನಡದ ಟಾಪ್ ನಿರೂಪಕಿ’; ಈಗ ಗೆಸ್ ಮಾಡಿ

Sat, 22 Apr 2023-9:23 pm,

ಇವರು ಬೇರೆ ಯಾರೂ ಅಲ್ಲ. ಕನ್ನಡದ ಖ್ಯಾತ ನಟಿ, ನಿರೂಪಕಿ ಶ್ವೇತಾ ಚಂಗಪ್ಪ. ಕೊಡಗಿನ ಸುಂದರಿ ಕರುನಾಡಿನ ಮನೆ ಮನೆಗಳಲ್ಲಿಯೂ ಈಗ ಪ್ರಸಿದ್ಧಿ ಪಡೆದಿದ್ದಾರೆ. ನಟನೆಗೂ ಸೈ, ನಿರೂಪಣೆ ಜೈ ಎನ್ನುವ ಈ ಸುಂದರಿಯ ಮುದ್ದಾದ ಫೋಟೋವನ್ನು ನೀವೇ ನೋಡಿ.

2003-2005ರ ಅವಧಿಯಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ, ಎಸ್. ನಾರಾಯಣ್ ನಿರ್ದೇಶಿಸಿದ ಸುಮತಿ ಧಾರಾವಾಹಿಯ ಮೂಲಕ ಶ್ವೇತಾ ಚಂಗಪ್ಪ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದರು.

ಇದಾದ ಬಳಿಕ ಅನೇಕ ಸೀರಿಯಲ್’ಗಳಲ್ಲಿ ನಟಿಸಿದ್ದ ಶ್ವೇತಾ, ನಿರೂಪಣೆಗೆ ಕಾಲಿಟ್ಟಿದ್ದು, ಜೀ ಕನ್ನಡದ ಯಾರಿಗುಂಟು ಯಾರಿಗಿಲ್ಲ ಎಂಬ ಟಿವಿ ಕಾರ್ಯಕ್ರಮದ ಮೂಲಕ.

ಇದರ ಜೊತೆಗೆ ಮಕ್ಕಳ ಡ್ಯಾನ್ಸ್ ಪ್ರೋಗ್ರಾಂ ಜೀ ಕನ್ನಡದ ಪ್ರಸಿದ್ಧ ಕುಣಿಯೋಣು ಬಾರಾಕ್ಕೆ ಸಹ ನಿರೂಪಣೆ ಮಾಡಿದ್ದರು ಶ್ವೇತಾ ಚಂಗಪ್ಪ.

ನಟ ದರ್ಶನ್ ತೂಗುದೀಪ್ ಜೊತೆ ತಂಗಿಗಾಗಿ, ಸಾಹಸ ಸಿಂಹ ವಿಷ್ಣುವರ್ಧನ್ ಜೊತೆ ವರ್ಷ ಎಂಬ ಕನ್ನಡ ಸಿನಿಮಾಗಳಲ್ಲೂ ಶ್ವೇತಾ ನಟಿಸಿದ್ದಾರೆ. ಇನ್ನು ಶ್ವೇತಾ ಬಿಗ್ ಬಾಸ್ ಕನ್ನಡ ಸೀಸನ್ 2 ರ ಸ್ಪರ್ಧಿಯಾಗಿದ್ದರು.  

ನಿರೂಪಣೆ ಜೊತೆಗೆ ಸೃಜನ್ ಲೋಕೇಶ್ ಅವರೊಂದಿಗೆ ಕನ್ನಡ ಸ್ಕೆಚ್ ಕಾಮಿಡಿ ಶೋ ಮಜಾ ಟಾಕೀಸ್‌ನಲ್ಲಿ ರಾಣಿಯಾಗಿ ನಟಿಸುತ್ತಿದ್ದರು.

ಶ್ವೇತಾ ಎರಡು ಬಾರಿ ಜೀ ಕನ್ನಡದ ಅತ್ಯುತ್ತಮ ನಿರೂಪಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇಷ್ಟಲ್ಲದೆ, ಅರುಂಧತಿ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ಕರ್ನಾಟಕ ಸರ್ಕಾರದಿಂದ 2013 ರ ಮಾಧ್ಯಮ ಸಮ್ಮಾನ್’ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

ಶ್ವೇತಾ ಚಂಗಪ್ಪ, ಕಿರಣ್ ಅಪ್ಪಚ್ಚು ಎಂಬವರನ್ನು ವಿವಾಹವಾಗಿದ್ದು, ಜಿಯಾನ್ ಅಯ್ಯಪ್ಪ ಎಂಬ ಮುದ್ದು ಮಗನಿದ್ದಾನೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link