ಆಟೋ ರಾಜ ಶಂಕರ್ನಾಗ್ ಪುತ್ರಿ ಯಾರು ಗೊತ್ತಾ? ಇವರು ಏನ್ ಮಾಡ್ತಿದ್ದಾರೆ...? ಅಪ್ಪ-ಅಮ್ಮನಂತೇ ಸಖತ್ ಫೇಮಸ್ ಈಕೆ
ಕನ್ನಡ ಸಿನಿರಂಗ ಕಂಡ ದಂತಕತೆಗಳಲ್ಲಿ ಶಂಕರ್ನಾಗ್ ಕೂಡ ಒಬ್ಬರು. ಇವರು ಕನ್ನಡ ಚಿತ್ರಲೋಕಕ್ಕೆ ನೀಡಿದ ಕೊಡುಗೆ ಅಪಾರ... ಅಂದಹಾಗೆ ಇವರ ಪುತ್ರಿಯ ಬಗ್ಗೆ ನಿಮಗೆ ತಿಳಿದಿದೆಯೇ?
ಅಪ್ಪ-ಅಮ್ಮನಂತೆ ಸಿನಿಮಾ ಆಗಲಿ, ರಂಗಭೂಮಿಯಾಗಲಿ ಎಲ್ಲೂ ಕಾಣಿಸಿಕೊಂಡವರಲ್ಲ.. ಹಾಗಾದ್ರೆ ಆಕೆ ಯಾವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ? ಅವರು ಯಾರು? ಈ ಎಲ್ಲಾ ವಿಚಾರಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ಶಂಕರ್ನಾಗ್ ಮಗಳ ಹೆಸರು ಕಾವ್ಯಾ ನಾಗ್. ಇವರು ‘ಕೋಕೋನೆಸ್’ ಎಂಬ ಸಂಸ್ಥೆಯ ಮೂಲಕ ಪರಿಶುದ್ಧ ತೆಂಗಿನ ಹಾಲಿನ ಎಣ್ಣೆಯನ್ನು ತಯಾರಿಸುತ್ತಿದ್ದಾರೆ.
ಬೆಂಗಳೂರು ಹೊರವಲಯದಲ್ಲಿ ಇವರ ಘಟಕವಿದ್ದು, ಇಲ್ಲಿ ಉತ್ಪತ್ತಿಯಾಗುವ ಶುದ್ಧ ತೆಂಗಿನ ಎಣ್ಣೆ ಅಥವಾ ವರ್ಜಿನ್ ಆಯಿಲ್ ಬೆಂಗಳೂರಿನ ಆರ್ಗ್ಯಾನಿಕ್ ಶಾಪ್ಗಳಲ್ಲಿ, ಕೊಕೊನೆಸ್ ವೆಬ್ಸೈಟ್, ಅಮೆಜಾನ್ನಂಥ ಆನ್ಲೈನ್ ಸೈಟ್ಗಳಲ್ಲಿ ಮಾರಾಟವಾಗುತ್ತದೆ.
ಆಸಕ್ತಿ ಇಲ್ಲದ ಕಾರಣ ಕಾವ್ಯಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿಲ್ಲವಂತೆ. ನಾಟಕಗಳನ್ನು ನೋಡೋದಕ್ಕೂ ಇಷ್ಟವಿದ್ದರೂ, ಪಾತ್ರ ಮಾಡೋದು, ರಂಗ ಚಟುವಟಿಕೆ, ಸಿನಿಮಾ ಮೊದಲಾದ ಕ್ಷೇತ್ರಗಳು ಅಭಿನಯಿಸೋದು ಅಷ್ಟಕ್ಕಷ್ಟೇಯಂತೆ. ಇನ್ನು ಕಾವ್ಯಾ ಓದಿರುವುದು, ವೈಲ್ಡ್ ಲೈಫ್ ಬಯಾಲಜಿ. ಜೀವವಿಜ್ಞಾನ, ವನ್ಯಜೀವಿಗಳ ಬಗ್ಗೆ ಆಸಕ್ತಿ ಇವರಿಗಿದೆ.