ಸ್ಯಾಂಡಲ್ವುಡ್’ನಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಯಾರು ಗೊತ್ತಾ? ಕಿಚ್ಚ, ದರ್ಶನ್, ಯಶ್.. ಇವರ್ಯಾರು ಅಲ್ಲ!
ಸ್ಯಾಂಡಲ್ವುಡ್’ನಲ್ಲಿ ಪ್ರಸ್ತುತ ಬಿಗ್ ಬಜೆಟ್ ಸಿನಿಮಾಗಳು ತೆರೆ ಮೇಲೆ ಬರುತ್ತಿವೆ. ಇದರ ಜೊತೆ ನಟ ನಟಿಯರು ಕೋಟಿ ಕೋಟಿ ಸಂಭಾವನೆ ಕೂಡ ಪಡೆಯುತ್ತಿದ್ದಾರೆ.
ನಾವಿಂದು ಈ ವರದಿಯಲ್ಲಿ ಸ್ಯಾಂಡಲ್ವುಡ್’ನಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಯಾರೆಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ದಿವಂಗತ ಪುನೀತ್ ರಾಜ್ ಕುಮಾರ್ ಬಾಲ್ಯದಲ್ಲಿಯೇ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಿದವರು. ಬಾಲ್ಯದಲ್ಲಿಯೇ ಮುದ್ದಾದ ಮಾತುಗಳಿಂದ ಜನಮನ ಗೆದ್ದಿದ್ದ ಅಪ್ಪು, ಮುಂದೆ ಹೀರೋ ಆಗಿ ಬಂದ ಮೇಲೂ ಅದೇ ಪ್ರೀತಿಯನ್ನ ಉಳಿಸಿಕೊಂಡಿದ್ದರು.
ಸ್ಯಾಂಡಲ್ವುಡ್’ನಲ್ಲಿ 1 ಕೋಟಿ ಸಂಭಾವನೆ ಪಡೆದ ಮೊದಲ ನಟ ಪುನೀತ್ ರಾಜಕುಮಾರ್.
ಪುರಿ ಜಗನ್ನಾಥ್ ಕಥೆ ಬರೆದಿದ್ದ, ಮೆಹರ್ ರಮೇಶ್ ನಿರ್ದೇಶನ ಮಾಡಿದ್ದ ವೀರ ಕನ್ನಡಿಗ ಚಿತ್ರದಲ್ಲಿ ಅಪ್ಪು ಅಭಿನಯಿಸಿದ್ದರು.
ಈ ಚಿತ್ರಕ್ಕೆ ಪುನೀತ್ ರಾಜಕುಮಾರ್ ಕೋಟಿ ಸಂಭಾವನೆಯನ್ನ ಪಡೆದಿದ್ದು, ಈ ಮೂಲಕ ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ಹೀರೋ ಎಂಬ ಖ್ಯಾತಿ ಗಳಿಸಿದ್ದಾರೆ.