ಇದುವರೆಗೆ 36 ಮಂದಿ ನಾಯಕತ್ವ ಕಂಡ ಟೀಂ ಇಂಡಿಯಾದ ಮೊದಲ ಕ್ಯಾಪ್ಟನ್‌ ಯಾರು ಗೊತ್ತಾ? ಇವರು ದೇಶದ ಹೆಮ್ಮಯ ಯೋಧನೂ ಆಗಿದ್ರು...

Mon, 09 Sep 2024-2:48 pm,

ಬ್ರಿಟಿಷರೊಂದಿಗಿನ ಸುದೀರ್ಘ ಹೋರಾಟದ ನಂತರ ನಮಗೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಬ್ರಿಟಿಷರು ಹೊರಟುಹೋದರೂ ಸಹ ಕ್ರಿಕೆಟ್ ಅನ್ನು ಇಲ್ಲಿಯೇ ಬಿಟ್ಟುಹೋದರು. ಈ ಆಟದ ಮೈದಾನದಲ್ಲಿ ನಮ್ಮ ದೇಶದ ಕಲಿಗಳು ಸಾಕಷ್ಟು ಕಾದಾಟ ಮಾಡಿದ್ದಾರೆ. ಇದರಲ್ಲಿ ಕೆಲವರು ಗೆದ್ದರು, ಕೆಲವರು ಸೋತರು. ಅನೇಕರು ಸೋಲು-ಗೆಲುವಿನ ಮೂಲಕ ಖ್ಯಾತಿ ಗಳಿಸಿದರು.

 

ಇಂದು ನಾವು ಮೈದಾನದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಆ ದಿಗ್ಗಜ ಕ್ರಿಕೆಟಿಗನ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇವರು ಯೋಧರಾಗಿದ್ದವರು. ಅವರ ಹೆಸರು ಕರ್ನಲ್ ಸಿಕೆ ನಾಯ್ಡು.

 

ಸಿ.ಕೆ.ನಾಯುಡು ಬಗ್ಗೆ ತಿಳಿದುಕೊಳ್ಳುವ ಮೊದಲು ಭಾರತದಲ್ಲಿ ಕ್ರಿಕೆಟ್ ಹೇಗೆ ಆರಂಭವಾಯಿತು? ಬ್ರಿಟಿಷರು ನಮ್ಮ ತಂಡವನ್ನು ಹೇಗೆ ಆಯ್ಕೆ ಮಾಡುತ್ತಿದ್ದರು?  ಟೀಮ್ ಇಂಡಿಯಾದಲ್ಲಿ ರಾಜರ ಸಂಸ್ಥಾನಗಳು, ರಾಜರು ಮತ್ತು ರಾಜಮನೆತನದವರು ಹೇಗೆ ಹಸ್ತಕ್ಷೇಪ ಮಾಡುತ್ತಿದ್ದರು? ಉತ್ತಮ ಆಟಗಾರರ ವಿರುದ್ಧ ಹೇಗೆ ತಾರತಮ್ಯ ಮಾಡಲಾಗುತ್ತಿತ್ತು? ಎಂಬುದನ್ನು ಕೂಡ ತಿಳಿಯುವುದು ಮುಖ್ಯವಾಗಿದೆ.

 

1889 ಮತ್ತು 1902 ರ ನಡುವೆ ಮೂರು ಇಂಗ್ಲಿಷ್ ತಂಡಗಳು ಭಾರತಕ್ಕೆ ಬಂದಿತ್ತು. ಆ ಸಮಯದಲ್ಲಿ ಗುಲಾಮ ಭಾರತದಲ್ಲಿ ಭಾರತೀಯರು ಆಗಷ್ಟೇ ಕ್ರಿಕೆಟ್‌ ಕಲಿಯುತ್ತಿದ್ದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ದೇಶದಲ್ಲಿ ಕ್ರಿಕೆಟ್‌ʼನ ಶೈಶವಾವಸ್ಥೆಯಾಗಿತ್ತು. 1926 ರಲ್ಲಿ ನಿಜವಾದ ಮಾನ್ಯತೆ ಸಿಕ್ಕಿತು.

 

ಇನ್ನು ಬಾಂಬೆಯ ಜಿಮ್ಖಾನಾದಲ್ಲಿ ಹಿಂದೂಗಳ ಪರ ಆಡುವಾಗ ಕರ್ನಲ್ ಸಿಕೆ ನಾಯ್ಡು 116 ನಿಮಿಷಗಳಲ್ಲಿ 156 ರನ್ ಗಳಿಸಿದರು. 11 ಸಿಕ್ಸರ್ ಮತ್ತು 14 ಬೌಂಡರಿಗಳನ್ನು ಒಳಗೊಂಡಿತ್ತು. ನಾಯ್ಡು ಮಾತ್ರವಲ್ಲದೆ ದಿಯೋಧರ್, ರಾಮ್‌ʼಜಿ ಮತ್ತು ಗೋದಾಂಬೆ ಎಂಬವರು ಸಹ ಅತ್ಯುತ್ತಮ ಕ್ರಿಕೆಟ್‌ ಆಡಿದ್ದರು.

 

ಇದಾದ ನಂತರ ಭಾರತಕ್ಕೆ 1932ರಲ್ಲಿ ಮೊದಲ ಬಾರಿಗೆ ಟೆಸ್ಟ್ ಸ್ಥಾನಮಾನ ಸಿಕ್ಕಿತು. ಅಂದು ಭಾರತ ಮೊದಲ ಬಾರಿಗೆ ಕ್ರಿಕೆಟ್ ಆಡಲು ವಿದೇಶಕ್ಕೆ ತೆರಳಿತು. ಆದರೆ ಅಂದು ಟೀಮ್ ಇಂಡಿಯಾವನ್ನು ಆಯ್ಕೆ ಮಾಡಿದ್ದು ಬ್ರಿಟಿಷ್ ಆಯ್ಕೆಗಾರರು.

 

ಇದು ಗುಲಾಮಗಿರಿಯ ಯುಗ, ಆದ್ದರಿಂದ ಒಬ್ಬ ರಾಜ, ಮಹಾರಾಜ ಅಥವಾ ನವಾಬನನ್ನು ಮಾತ್ರ ತಂಡದ ನಾಯಕನನ್ನಾಗಿ ಮಾಡಲಾಯಿತು. ಇಷ್ಟೇ ಅಲ್ಲ, ತಂಡದಲ್ಲಿ ಕನಿಷ್ಠ ಅರ್ಧ ಡಜನ್ ಆಟಗಾರರು ರಾಜವಂಶದವರು ಮತ್ತು ಅವರ ಸ್ನೇಹಿತರಾಗಿದ್ದರು. 1932 ರಲ್ಲಿ ಭಾರತದ ಮೊದಲ ವಿದೇಶಿ ಪ್ರವಾಸದ ಸಂದರ್ಭದಲ್ಲಿ ಪಟಿಯಾಲದ ಮಹಾರಾಜನನ್ನು ನಾಯಕನನ್ನಾಗಿ ಮಾಡಲಾಯಿತು. ಆದರೆ ಪಟಿಯಾಲದ ಮಹಾರಾಜ ನಿರಾಕರಿಸಿದಾಗ, ಆಜ್ಞೆಯನ್ನು ಪೋರಬಂದರ್‌ನ ರಾಜಾ ರಾಣಾ ಸಾಹೇಬ್‌ʼಗೆ ಹಸ್ತಾಂತರಿಸಲಾಯಿತು. ಅವರ ನಿಕಟ ಸಂಬಂಧಿ ಘನಶ್ಯಾಮ್ ಸಿಂಗ್ ಅವರಿಗೆ ಉಪನಾಯಕತ್ವ ಸಿಕ್ಕಿತು.

 

ಸಿಕೆ ನಾಯುಡು ಈ ತಂಡದ ಅತ್ಯಂತ ಅನುಭವಿ ಹಾಗೂ ಉತ್ತಮ ಆಟಗಾರ ಎಂಬುದು ಗೊತ್ತಿದ್ದರೂ ಅವರನ್ನು ಕಡೆಗಣಿಸಲಾಗಿದೆ. ಈ ಪಂದ್ಯ ಲಾರ್ಡ್ಸ್‌ʼನಲ್ಲಿ ನಡೆಯಬೇಕಿತ್ತು. ಭಾರತವು ಐತಿಹಾಸಿಕ ಮೈದಾನದಿಂದ ಟೆಸ್ಟ್ ಕ್ರಿಕೆಟ್‌ʼಗೆ ಪಾದಾರ್ಪಣೆ ಮಾಡುತ್ತಿದೆ, ಆದ್ದರಿಂದ ಈ ಐತಿಹಾಸಿಕ ಕ್ಷಣವನ್ನು ಗಮನದಲ್ಲಿಟ್ಟುಕೊಂಡು ರಾಣಾ ಸಾಹೇಬ್ ಮತ್ತು ಘನಶ್ಯಾಮ್ ಸಿಂಗ್ ತಂಡದಿಂದ ಹಿಂದೆ ಸರಿಯುವ ಅದ್ಭುತ ನಿರ್ಧಾರವನ್ನು ತೆಗೆದುಕೊಂಡರು.

 

ಸಾಮರ್ಥ್ಯ ಅರಿತು ನಾಯಕತ್ವವನ್ನು ಸಿ.ಕೆ.ನಾಯುಡು ಅವರಿಗೆ ಹಸ್ತಾಂತರಿಸಿದರು. ಆದರೆ ತಂಡದ ಇತರ ರಾಜರು ಮತ್ತು ಚಕ್ರವರ್ತಿಗಳು ಸಾಮಾನ್ಯ ವ್ಯಕ್ತಿಯ ನಾಯಕತ್ವದಲ್ಲಿ ಆಡಲು ಬಯಸಲಿಲ್ಲ, ಆದ್ದರಿಂದ ಅವರು ಪಂದ್ಯದ ಒಂದು ದಿನ ಮೊದಲು ಬಂಡಾಯವೆದ್ದರು. ಭಾರತದಲ್ಲಿ ಪಟಿಯಾಲದ ಮಹಾರಾಜರಿಗೆ ಕರೆ ಮಾಡಲಾಯಿತು. ಆದರೆ ನಂತರ ಪಟಿಯಾಲದ ಮಹಾರಾಜರು ಎಂದಿಗೂ ಕ್ರಿಕೆಟ್ ಆಡುವುದಿಲ್ಲ ಎಂದು ನಿರಾಕರಿಸಿದರು. ಈ ಮೂಲಕ ಕರ್ನಲ್ ಸಿಕೆ ನಾಯುಡು ನಾಯಕತ್ವದಲ್ಲಿ ಟೆಸ್ಟ್‌ ಆಡಲಾಯಿತು.

 

ಈ ಪಂದ್ಯವನ್ನು ಭಾರತ 158 ರನ್‌ʼಗಳಿಂದ ಸೋತರೂ, ಈ ಸೋಲು ಅಡಿಪಾಯದಂತಾಯಿತು. ಕರ್ನಲ್ ಸಿಕೆ ನಾಯ್ಡು, ಹೋಳ್ಕರ್ ಸೇನೆಯ ಕಮಾಂಡರ್ ಆಗಿದ್ದಲ್ಲದೆ, ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದರು. ಅಷ್ಟೇ ಅಲ್ಲದೆ ಭಾರತೀಯ ಕ್ರಿಕೆಟ್‌ʼನ ಮೊದಲ ಸೂಪರ್‌ ಹೀರೋ ಆದರು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link