ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಭಾವೀ ಪತ್ನಿ ಯಾರು ಗೊತ್ತಾ? ಮಿಯಾನ್ ಪಾಲಿನ ದೇವತೆಯಂತೆ ಈ ಅತಿಲೋಕ ಸುಂದರಿ
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ಮೊಹಮ್ಮದ್ ಸಿರಾಜ್ ಭಾವೀ ಪತ್ನಿ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.
ಈ ಹಿಂದೆ ಹೈದರಾಬಾದ್’ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮೊಹಮ್ಮದ್ ಸಿರಾಜ್ ತಮ್ಮ ಭಾವಿ ಪತ್ನಿ ಬಗ್ಗೆ ಹೇಳಿಕೆ ನೀಡಿದ್ದಾರೆ.
ಮೊಹಮ್ಮದ್ ಸಿರಾಜ್ ತಮ್ಮ ಭಾವಿ ಪತ್ನಿಯ ಬಗ್ಗೆ ಹೇಳಿದ್ದು ಇದೇ ಮೊದಲು. ಇದುವರೆಗೆ ತನ್ನ ಗೆಳತಿ ಅಥವಾ ಸಂಬಂಧದ ಬಗ್ಗೆ ಎಂದೂ ಮಾತನಾಡಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಆಕೆ ಯಾರು ಎಂಬುದನ್ನು ಬಹಿರಂಗಪಡಿಸದಿದ್ದರೂ, ತಾವು ರಿಲೇಶನ್ಶಿಪ್’ನಲ್ಲಿ ಇರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ನಿಶ್ಚಿತಾರ್ಥ ಮುಗಿದಿದೆ. ಇನ್ನು ಕೆಲ ದಿನಗಳಲ್ಲಿ ಮದುವೆಯಾಗಲಿದ್ದಾರೆ ಎಂಬುದು ಕೂಡ ತಿಳಿದುಬಂದಿದೆ.
ಅಂದಹಾಗೆ ತಂದೆಯ ಸಾವಿನ ನೋವಿನಲ್ಲಿದ್ದ ಸಿರಾಜ್ ಬದುಕಿಗೆ ಹುರುಪನ್ನು ತಂದವರೇ ಈಕೆಯಂತೆ. ಈ ಬಗ್ಗೆಯೂ ಸಿರಾಜ್ ಹೇಳಿಕೊಂಡಿದ್ದಾರೆ.
ತಂದೆ ನಿಧನರಾದ ಸಂದರ್ಭದಲ್ಲಿ, ಮೊಹಮ್ಮದ್ ಸಿರಾಜ್ ಅವರು ಭಾರತೀಯ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಾದಲ್ಲಿದ್ದರು. ಸುದ್ದಿ ಕೇಳಿದ ಅವರಿಗೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂತಹ ಸಂದರ್ಭದಲ್ಲಿ ತನ್ನೊಂದಿಗೆ ನಿಂತ ಭಾವೀ ಪತ್ನಿಯನ್ನು ಮನಸಾರೆ ಕೊಂಡಾಡಿದ್ದಾರೆ ಮಿಯಾನ್.