ಟಿ20 ಕ್ರಿಕೆಟ್’ನಲ್ಲಿ ಈ ವರ್ಷ ಅತಿ ಹೆಚ್ಚು ಶುಲ್ಕ ಪಡೆದ ಕ್ರಿಕೆಟಿಗ ಯಾರು? ಕೊಹ್ಲಿ, ರೋಹಿತ್ ಅಲ್ಲವೇ ಅಲ್ಲ
ಕ್ರಿಕೆಟ್’ನಲ್ಲಿ ಮೂರು ಸ್ವರೂಪಗಳಿವೆ. ಟೆಸ್ಟ್, ಏಕದಿನ ಮತ್ತು ಟಿ20. ಟೆಸ್ಟ್ ಸುಮಾರು 4-5 ದಿನಗಳ ಕಾಲ ನಡೆದ ಏಕದಿನ ಹೆಸರೇ ಸೂಚಿಸುವಂತೆ 50 ಓವರ್’ಗಳಲ್ಲಿ ಮುಕ್ತಾಯಗೊಳ್ಳುವ ಪಂದ್ಯ, ಸಾಮಾನ್ಯವಾಗಿ ಒಂದು ದಿನ ತೆಗೆದುಕೊಳ್ಳುತ್ತದೆ, ಇನ್ನು ಟಿ20 ಪಂದ್ಯ 20 ಓವರ್’ಗಳದ್ದಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡಿರುವ ಸ್ವರೂಪ.
ಕ್ರಿಕೆಟ್’ನಲ್ಲಿ ಸದ್ಯ ಹೆಚ್ಚು ಆದಾಯ ಬರುತ್ತಿರುವುದು ಟಿ20 ಕ್ರಿಕೆಟ್’ನಿಂದ. ಅನೇಕ ಜಾಹಿರಾತುದಾರರು, ಹೂಡಿಕೆದಾರರು ಮತ್ತು ಪ್ರವರ್ತಕರು ಈ ಯಶಸ್ವಿ ಲೀಗ್’ನ್ನು ತಮ್ಮ ಆದಾಯದ ಮೂಲವನ್ನಾಗಿಸಿಕೊಂಡಿದ್ದಾರೆ. ಇನ್ನೊಂದೆಡೆ ಕ್ರಿಕೆಟ್’ಗೆ ಭಾರಿ ಪ್ರಮಾಣದ ಹಣ ಹರಿದುಬರುವುದರೊಂದಿಗೆ ಆಟಗಾರರು ಶ್ರೀಮಂತರಾಗುತ್ತಿದ್ದಾರೆ.
ನಾವಿಂದು ಈ ವರದಿಯಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರ ಬಗ್ಗೆ ಮಾತನಾಡುತ್ತೇವೆ.
ಪ್ಯಾಟ್ ಕಮ್ಮಿನ್ಸ್: ಆಸೀಸ್ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರಸ್ತುತ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಾಗಿದ್ದಾರೆ. ಆಸ್ಟ್ರೇಲಿಯಾಕ್ಕಾಗಿ ಎಲ್ಲಾ ಸ್ವರೂಪಗಳಲ್ಲಿ ಆಡುವ ಅವರು, 200k ನಾಯಕತ್ವದ ಬೋನಸ್ ಸೇರಿದಂತೆ USD 2 ಮಿಲಿಯನ್ ಮೌಲ್ಯದ ಕೇಂದ್ರ ಒಪ್ಪಂದವನ್ನು ಹೊಂದಿದ್ದಾರೆ. ಬಲಗೈ ವೇಗಿ ಸತತ ಎರಡನೇ ವರ್ಷವೂ ಆಸ್ಟ್ರೇಲಿಯಾದ ಅತಿ ಹೆಚ್ಚು ಗಳಿಸಿದ ಆಟಗಾರನಾಗಿ ಉಳಿದಿದ್ದಾರೆ. USD 166.6K ತಿಂಗಳಿಗೆ ಗಳಿಸುತ್ತಾರೆ.
ಡೇವಿಡ್ ವಾರ್ನರ್: ಡೇವಿಡ್ ವಾರ್ನರ್ ಈಗಾಗಲೇ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವ ಸೂಚನೆಯನ್ನು ನೀಡಿದ್ದಾರೆ. ಇವರು USD 1.5 ಮಿಲಿಯನ್ ಮೌಲ್ಯದ ಬೃಹತ್ ಕೇಂದ್ರ ಒಪ್ಪಂದವನ್ನು ಹೊಂದಿದ್ದಾರೆ. 2022 ರ ಕೇಂದ್ರ ಒಪ್ಪಂದಗಳ ಪ್ರಕಾರ, ಡೇವಿಡ್ ವಾರ್ನರ್ USD 125k/ತಿಂಗಳಿಗೆ ಗಳಿಸುತ್ತಾರೆ.
ಸ್ಟೀವನ್ ಸ್ಮಿತ್: ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್’ನಲ್ಲಿ ಆಧುನಿಕ ದಿನದ ಅತ್ಯುತ್ತಮ ಬ್ಯಾಟರ್ ಎಂದು ಹೇಳಬಹುದು. ಸ್ಮಿತ್ CA ಜೊತೆಗೆ USD 1.3 ಮಿಲಿಯನ್ ಮೌಲ್ಯದ ವಾರ್ಷಿಕ ಒಪ್ಪಂದವನ್ನು ಹೊಂದಿದ್ದಾರೆ. ತಿಂಗಳಿಗೆ ಸರಿಸುಮಾರು USD 108.3k ಗಳಿಸುತ್ತಿದ್ದಾರೆ.
ಮಾರ್ನಸ್ ಲ್ಯಾಬುಸ್ಚಾಗ್ನೆ: ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಟೀವನ್ ಸ್ಮಿತ್ ಜೊತೆಗೆ ಆಸ್ಟ್ರೇಲಿಯಾದ ಅತ್ಯಂತ ಪ್ರಮುಖ ಬ್ಯಾಟರ್ ಆಗಿ ಬೆಳೆದಿದ್ದಾರೆ. ವಾರ್ಷಿಕವಾಗಿ USD 1.2 ಮಿಲಿಯನ್ ಒಪ್ಪಂದವನ್ನು ನೀಡಿದೆ. ಆದ್ದರಿಂದ, ಅವರ ಗಳಿಕೆಯು ಪ್ರಸ್ತುತ ಪ್ರತಿ ತಿಂಗಳಿಗೆ USD 100k ಆಗಿದೆ.
ವಿರಾಟ್ ಕೊಹ್ಲಿ: ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ಮತ್ತು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರು. ಕೊಹ್ಲಿ BCCI ಯಿಂದ A+ ಒಪ್ಪಂದವನ್ನು ಹೊಂದಿದ್ದು, ಪ್ರತೀ ಟಿ20 ಪಂದ್ಯಕ್ಕೆ ಅವರು ಬರೋಬ್ಬರಿ 3 ಲಕ್ಷ ರೂ. ಪಡೆಯುತ್ತಾರೆ. ವಾರ್ಷಿಕವಾಗಿ 7 ಕೋಟಿ ರೂ. ಗಳಿಕೆ ಮಾಡುತ್ತಾರೆ.
ರೋಹಿತ್ ಶರ್ಮಾ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಸ್ತುತ ಸ್ವರೂಪಗಳಾದ್ಯಂತ ವಿಶ್ವ ಕ್ರಿಕೆಟ್’ನಲ್ಲಿ ಅತ್ಯುತ್ತಮ ಆರಂಭಿಕ ಆಟಗಾರರಾಗಿದ್ದಾರೆ. BCCI ಯಿಂದ A+ ಒಪ್ಪಂದವನ್ನು ಹೊಂದಿದ್ದಾರೆ. ಇವರೂ ಕೂಡ ವಾರ್ಷಿಕವಾಗಿ INR 7 ಕೋಟಿ ಗಳಿಸುತ್ತಾರೆ.
ಜಸ್ಪ್ರೀತ್ ಬುಮ್ರಾ: ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಭಾರತೀಯ ಕ್ರಿಕೆಟ್’ನಲ್ಲಿ ಪ್ರಮುಖ ಆಟಗಾರರಾಗಿದ್ದಾರೆ. ಪ್ರಸ್ತುತ BCCI ಯಿಂದ A+ ಒಪ್ಪಂದವನ್ನು ಹೊಂದಿರುವ ಕೇವಲ ಮೂರು ಕ್ರಿಕೆಟಿಗರಲ್ಲಿ ಇವರೂ ಒಬ್ಬರು. ಬಲಗೈ ವೇಗಿಯು ವಾರ್ಷಿಕವಾಗಿ INR 7 ಕೋಟಿ ಗಳಿಸುತ್ತಾರೆ.