ನಟಿ ವಿನಯ ಪ್ರಸಾದ್ʼರ 2ನೇ ಪತಿ ಮತ್ತು ಮಗಳು ಯಾರು ಗೊತ್ತೇ? ಗಂಡ ಜನಪ್ರಿಯ ನಟ... ಪುತ್ರಿ ಕೂಡ ಚಿತ್ರರಂಗದ ಖ್ಯಾತ ಹೀರೋಯಿನ್
ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ ವಿನಯ ಪ್ರಸಾದ್ ಬಹುದೊಡ್ಡ ಹೆಸರು ಮಾಡಿದ್ದಾರೆ. ಹಿರಿತೆರೆಯಾಗಲಿ, ಕಿರುತೆರೆಯಾಗಲಿ ಅಭಿನಯದಲ್ಲಿ ಸಕ್ರಿಯರಾಗಿರುವ ಈ ನಟಿ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಪಾರು' ಧಾರಾವಾಹಿಯಲ್ಲಿ ಅರಸನ ಕೋಟೆ ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಅಂದಹಾಗೆ ಈ ವರದಿಯಲ್ಲಿ ವಿನಯ ಪ್ರಸಾದ್ ಅವರ ಎರಡನೇ ಪತಿ ಮತ್ತು ಮಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವಿನಯ ಪ್ರಸಾದ್ ಪುತ್ರಿ ಪ್ರಥಮ ಪ್ರಸಾದ್ ಕೂಡಾ ಕಲಾವಿದೆ. ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಅವರು, ಕಥಕ್ ನೃತ್ಯಗಾರ್ತಿ ಕೂಡಾ ಹೌದು.
ಇನ್ನು ವಿನಯ ಪ್ರಸಾದ್ ಅವರ ಮೊದಲ ಪತಿ ಕೃಷ್ಣ ಪ್ರಸಾದ್ ನಿಧನದ ನಂತರ ಅವರು ಎರಡನೆ ಮದುವೆಯಾಗಿದ್ದಾರೆ ಎನ್ನಲಾಗಿದೆ.
1995ರಲ್ಲಿ ಮೊದಲ ಪತಿ ಪ್ರಸಾದ್ ಇಹಲೋಕ ತ್ಯಜಿಸಿದ್ದಾರೆ. ಆ ನಂತರ ಏಳು ವರ್ಷಗಳ ಬಳಿಕ ಜ್ಯೋತಿ ಪ್ರಕಾಶ್ ಎಂಬವರ ಜೊತೆ ಎರಡನೇ ಮದುವೆ ಆಗಿದ್ದಾರೆ.
ಇನ್ನು ವಿನಯಾ ಪ್ರಸಾದ್ ಎರಡನೆ ಪತಿ ಪ್ರಕಾಶ್. ಅವರಿಗೂ ಸಹ ಇದು ಎರಡನೆ ಮದುವೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಪ್ರಕಾಶ್ ನಂತರ ವಿನಯಾ ಪ್ರಸಾದ್ ಜೊತೆ ವಿವಾಹವಾಗಿದ್ದರು.
ಜ್ಯೋತಿ ಪ್ರಕಾಶ್ ಕೂಡ ಖ್ಯಾತ ಸೆಲೆಬ್ರಿಟಿಯಾಗಿದ್ದು, ಸಾಕಷ್ಟು ಸಿನಿಮಾಗೆ ಇವರು ಗಾಯಕರಾಗಿದ್ದಾರೆ.