2ನೇ ಮದ್ವೆಯಾಗಿ ಸುದ್ದಿಯಾಗಿದ್ದ ನಟಿ ಜ್ಯೋತಿ ರೈಗೆ ಇಷ್ಟು ದೊಡ್ಡ ಮಗನಿದ್ದಾನಾ? ಅಮ್ಮನ ಎದೆಯತ್ತರಕ್ಕೆ ಬೆಳೆದ ಮಗ ಎಷ್ಟೊಂದು ಕ್ಯೂಟ್‌ ನೋಡಿ

Mon, 05 Aug 2024-6:22 pm,

ಕನ್ನಡದ ಜೋಗುಳ, ಕಿನ್ನರಿ, ಬಂದೇ ಬರತಾವ ಕಾಲ ಹೀಗೆ ಅನೇಕ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಜ್ಯೋತಿ ರೈ ಸದ್ಯ ತೆಲುಗು ಭಾಷೆಯ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಾ ಮಿಂಚುತ್ತಿದ್ದಾರೆ.

 

ತನ್ನ ಅಪೂರ್ವ ಸೌಂದರ್ಯದ ಜೊತೆ ಪ್ರತಿಭೆಯನ್ನೂ ಹೊಂದಿರುವ ಈ ನಟಿ ಇತ್ತೀಚೆಗೆ ನಿರ್ದೇಶಕರೊಬ್ಬರ ಜೊತೆ ಎರಡನೇ ವಿವಾಹವಾಗಿದ್ದರು.

 

1987 ರ ಜುಲೈ 4 ರಂದು ಜನಿಸಿದ ಜ್ಯೋತಿ ತಮ್ಮ ಸಂಪೂರ್ಣ ಶಿಕ್ಷಣವನ್ನು ಪುತ್ತೂರಿನಲ್ಲಿ ಮಾಡಿದ್ದಾರೆ.

 

ಅಂದಹಾಗೆ ತಮ್ಮ 20ನೇ ವಯಸ್ಸಿನಲ್ಲೇ ಜ್ಯೋತಿ ರೈ ಪದ್ಮನಾಭ್‌ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಈ ಜೋಡಿ ಬೇರೆ ಬೇರೆಯಾಗಿದೆ. ಈ ದಂಪತಿಗೆ 10 ವರ್ಷದ ಮಗನೂ ಇದ್ದಾನೆ.

 

ಇದೀಗ ತೆಲುಗಿನ ನಿರ್ದೇಶಕ ಸುರೇಶ್‌ ಕುಮಾರ್‌ ಪೂರ್ವಜ್‌ ಜತೆ ಎರಡನೇ ಮದುವೆಯಾಗಿರುವ ನಟಿ ಜ್ಯೋತಿ ರೈ, ಅವರ ಜೊತೆಗಿರುವ ಅನೇಕ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ್ಗೆ ಶೇರ್‌ ಮಾಡುತ್ತಲಿರುತ್ತಾರೆ.

 

ಇನ್ನು ಈ ನಟಿ ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಫೋಟೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಸಖತ್‌ ಟ್ರೆಂಡಿ ಹಾಗೂ ಕ್ಯೂಟ್‌ ಆಗಿರುವ ಈ ಫೋಟೋಗಳು ಪಡ್ಡೆ ಹುಡುಗರ ಮನ ಕದಿಯೋದು ಸುಳ್ಳಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link