ದೃಷ್ಟಿ ನಿವಾರಕ ಕಪ್ಪು ದಾರವನ್ನು ದೇಹದ ಯಾವ ಭಾಗಕ್ಕೆ ಕಟ್ಟಿದ್ರೆ ಶುಭ? ಜಾತಕದಲ್ಲಿ ಶನಿ ಬಲ ಪಡಿಸಲು ಇದನ್ನು ಹೇಗೆ ಬಳಸಬಹುದು!
ಕಪ್ಪು ದಾರವು ದೃಷ್ಟಿ ನಿವಾರಕ ರಕ್ಷೆ ಆಗಿದೆ. ಪ್ರಸ್ತುತ ಕಪ್ಪು ದಾರ ಧಾರಣೆ ಒಂದು ಟ್ರೆಂಡ್ ಆಗಿಯೇ ಬದಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಪ್ಪು ದಾರ ಧಾರಣೆಯು ಜ್ಯೋತಿಷ್ಯದಲ್ಲಿ ಬಹಳ ಮಹತ್ವವನ್ನು ಹೊಂದಿದೆ. ಆದರೆ, ಇದನ್ನು ಯಾರು ದೇಹದ ಯಾವ ಅಂಗದಲ್ಲಿ ಕಟ್ಟಬೇಕು ಎಂಬುದನ್ನೂ ತಿಳಿದಿರಬೇಕು.
ಸಾಮಾನ್ಯವಾಗಿ ಕೆಲವರು ಕೈಯಲ್ಲಿ, ಇನ್ನೂ ಕೆಲವರು ಕಾಲಲ್ಲಿ ಕಪ್ಪು ದಾರವನ್ನು ಧಾರಣೆ ಮಾಡುತ್ತಾರೆ. ಆದರೆ, ಧರ್ಮ ಶಾಸ್ತ್ರದ ಪ್ರಕಾರ ಇದು ಸರಿಯಲ್ಲ.
ಕಪ್ಪು ದಾರವನ್ನು ರಕ್ಷಾ ಸೂತ್ರ ಎಂದು ನಂಬಲಾಗಿದೆ. ಹಾಗಾಗಿ ಇದನ್ನು ಕಾಲಿಗೆ ಕಟ್ಟಬಾರದು. ಇದರಿಂದ ಶುಭ ಫಲದ ಬದಲಿಗೆ ಅಶುಭ ಫಲಗಳು ಹೆಚ್ಚಾಗುತ್ತವೆ.
ನಿಮ್ಮ ಜಾತಕದಲ್ಲಿ ಶನಿ ದೋಷವಿದ್ದರೆ ಇದನ್ನು ನಿವಾರಿಸಿ ಜಾತಕದಲ್ಲಿ ಶನಿಯಲ್ಲಿ ಬಲಗೊಳಿಸಲು ಸೊಂಟ, ಕೈ ಅಥವಾ ಕುತ್ತಿಗೆಯಲ್ಲಿ ಕಪ್ಪು ದಾರವನ್ನು ಧರಿಸಬೇಕು.
ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಿಳೆಯರು ಎಡಗೈಯಲ್ಲಿ, ಪುರುಷರು ಬಲಗೈಯಲ್ಲಿ ಕಪ್ಪು ದಾರವನ್ನು ಧಾರಣೆ ಮಾಡುವುದರಿಂದ ಅವರ ಜೀವನದಲ್ಲಿ ಸಕಾರಾತ್ಮಕ ಶಕ್ತಿ ಪ್ರವಹಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಪ್ಪು ದಾರ ರಕ್ಷಾ ಕವಚವೇ ಆದರೂ, ಮೇಷ, ಕರ್ಕ, ಸಿಂಹ ವೃಶ್ಚಿಕ ರಾಶಿಯ ಜನರಿಗೆ ಕಪ್ಪು ದಾರ ಧಾರಣೆ ಅಶುಭ ಫಲಗಳನ್ನು ನೀಡಬಹುದು ಎನ್ನಲಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.