ನನ್ನ ನಂತರ ನನ್ನೆಲ್ಲಾ ಆಸ್ತಿ ಇವರಿಗೇ! ಜೀವ ಬೆದರಿಕೆ ಮಧ್ಯೆಯೇ ತನ್ನ 2,900 ಕೋಟಿ ಆಸ್ತಿಯ ವಾರಸುದಾರ ಯಾರೆಂದು ಘೋಷಿಸಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಲಾರೆನ್ಸ್ ಬಿಷ್ನೋಯ್ ಗ್ಯಾಂಗ್ ನಿಂದ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಸಲ್ಮಾನ್ ಖಾನ್ ಮತ್ತು ಅವರ ಆಪ್ತರನ್ನೇ ಗುರಿಯಾಗಿರಿಸಿಕೊಂಡು ಈ ಗ್ಯಾಂಗ್ ಕೆಲಸ ಮಾಡುತ್ತಿದೆ.
ಸಲ್ಮಾನ್ ಖಾನೇ ಹೇಳುವಂತೆ ಮನೆಯಿಂದ ಹೊರಗೆ ಹೋದರೆ ಮತ್ತೆ ಮನೆ ತಲುಪುತ್ತಾರೆಯೇ ಎನ್ನುವ ನಂಬಿಕೆ ಅವರಿಗೂ ಇಲ್ಲವಂತೆ. ಅಷ್ಟರ ಮಟ್ಟಿಗೆ ಜೀವ ಬೆದರಿಕೆ ಇದೆ.
ಈ ಮಧ್ಯೆ, ಸಲ್ಮಾನ್ ಖಾನ್ ತನ್ನ ಜೀವನದ ಬಹು ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಆ ಬಗ್ಗೆ ಘೋಷಣೆಯನ್ನೂ ಮಾಡಿದ್ದಾರೆಯಂತೆ.
ಹೌದು, ಸಲ್ಮಾನ್ ಖಾನ್ ಗೆ 59 ವರ್ಷ ವಯಸ್ಸಾಯಿತು. ಆದರೂ ಮದುವೆಯಿಲ್ಲ, ಮಕ್ಕಳಿಲ್ಲ. ಮಗುವನ್ನು ದತ್ತು ತೆಗೆದುಕೊಳ್ಳಬೇಕು ಎನ್ನುವ ನಿರ್ಧಾರಕ್ಕೆ ಕಾನೂನು ಕಂಟಕ ಇದೆ.
ಗರ್ಲ್ ಫ್ರೆಂಡ್ ಗಳ ವಿಚಾರದಲ್ಲಿ ಸದಾ ಮುಂದಿದ್ದ ಸಲ್ಮಾನ್ ಈಗ ಅವರುಗಳ ಬಗ್ಗೆಯೂ ಆಸಕ್ತಿ ಕಳೆದುಕೊಂಡಿದ್ದಾರೆ. ಮಾಡುವೆ ಅನ್ನುವುದು ಇನ್ನು ಸಾಧ್ಯವಾಗದ ಮಾತು ಎನ್ನುವುದನ್ನು ಕೂಡಾ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.
60ರ ಆಸುಪಾಸಿನಲ್ಲಿಯೂ ಅತಿ ಹೆಚ್ಚು ಸಂಭಾವನೆ ಪಡೆಯುವ ಸಲ್ಮಾನ್ ಅವರ ಒಟ್ಟು ಆಸ್ತಿ 2,900 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.ಖಾನ್ ವಾರ್ಷಿಕವಾಗಿ 220 ಕೋಟಿ ಮತ್ತು ಮಾಸಿಕ 16 ಕೋಟಿ ಗಳಿಗೂ ಅಧಿಕ ಹಣ ಸಂಪಾದಿಸುತ್ತಾರೆ ಎನ್ನುತ್ತವೆ ಮೂಲಗಳು.
ಹಾಗಿದ್ದರೆ ಮದುವೆ ಮಕ್ಕಳು ಇಲ್ಲದ ಸಲ್ಮಾನ್ ಇಷ್ಟೊಂದು ಪ್ರಮಾಣದ ಆಸ್ತಿ ಯಾರ ಪಾಲಾಗುತ್ತದೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಈ ಪ್ರಶ್ನೆಗೆ ಖುದ್ದು ಸಲ್ಮಾನ್ ಉತ್ತರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಬಾಲಿವುಡ್ ಭಾಯಿಜಾನ್, ತಮ್ಮ ಆಸ್ತಿಯ ಅರ್ಧದಷ್ಟು ಭಾಗವನ್ನು ಟ್ರಸ್ಟ್‌ಗೆ ದಾನ ಮಾಡುವುದಾಗಿ ಹೇಳಿದ್ದಾರೆ. ತಾನು ಮದುವೆಯಾದರೂ, ಮದುವೆಯಾಗದಿದ್ದರೂ ಅರ್ಧದಷ್ಟು ಆಸ್ತಿ ಟ್ರಸ್ಟ್‌ಗೆ ಸೇರುವುದಾಗಿ ಹೇಳಿದ್ದಾರೆ.
ಒಂದು ವೇಳೆ ತನ್ನ ಕೊನೆ ಕಾಲದವರೆಗೆ ಮದುವೆಯಾಗದೇ ಉಳಿದರೆ 100% ಆಸ್ತಿಯನ್ನು ಟ್ರಸ್ಟ್‌ಗೆ ದಾನ ಮಾಡುವುದಾಗಿ ಹೇಳಿದ್ದಾರೆ.
ಸಲ್ಮಾನ್ ಭಾರತದಲ್ಲಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಹೆಸರಿನ ಚಾರಿಟಿಯನ್ನು ನಡೆಸುತ್ತಿದ್ದಾರೆ. ಸಲ್ಮಾನ್ ತಾನು ಸ್ಥಾಪಿಸಿದ ಟ್ರಸ್ಟ್ ತನ್ನ ಸಂಪೂರ್ಣ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುತ್ತದೆ ಎನ್ನುವ ಸುಳಿವು ನೀಡಿದ್ದಾರೆ.
ನಂತರ ಸಲ್ಮಾನ್ ಖಾನ್ ತಮ್ಮ ಆಸ್ತಿಯನ್ನು ತಮ್ಮ ನಾಲ್ವರು ಸಹೋದರರಿಗೆ ಹಂಚುತ್ತಾರೆ ಎಂಬ ವರದಿಗಳೂ ಬಂದಿದ್ದವು.