ನನ್ನ ನಂತರ ನನ್ನೆಲ್ಲಾ ಆಸ್ತಿ ಇವರಿಗೇ! 2,900 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯ ಉತ್ತರಾಧಿಕಾರಿ ಘೋಷಿಸಿದ ಸಲ್ಮಾನ್
ಸಲ್ಮಾನ್ ಖಾನ್ ಗೆ 58 ವರ್ಷ ವಯಸ್ಸಾಗಿದ್ದರೂ ಇಂದಿಗೂ ಅವರನ್ನು ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದೇ ಕರೆಯಲಾಗುತ್ತದೆ.ಸಲ್ಮಾನ್ ಖಾನ್ ಇನ್ನೂ ಮದುವೆಯಾಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಈಗಂತೂ ಸಲ್ಮಾನ್ ಮದುವೆ,ಗರ್ಲ್ ಫ್ರೆಂಡ್ ಗಳ ಬಗ್ಗೆ ಸಂಪೂರ್ಣ ಆಸಕ್ತಿ ಕಳೆದುಕೊಂಡಿದ್ದಾರೆ ಎಂದೇ ಹೇಳಲಾಗುತ್ತಿದೆ.ಅನೇಕ ಸಂದರ್ಶನಗಳಲ್ಲಿ ಕೂಡಾ ಸಲ್ಮಾನ್ ಈ ಬಗ್ಗೆ ಮಾತನಾಡಿದ್ದಾರೆ.
ಸಲ್ಮಾನ್ ಇಂದಿಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟರಲ್ಲಿ ಒಬ್ಬರಾಗಿದ್ದಾರೆ.ಅವರ ಒಟ್ಟು ಆಸ್ತಿ 2,900 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.ಖಾನ್ ವಾರ್ಷಿಕವಾಗಿ 220 ಕೋಟಿ ಮತ್ತು ಮಾಸಿಕ 16 ಕೋಟಿ ಗಳಿಸುತ್ತಾರೆ ಎನ್ನುತ್ತವೆ ಮೂಲಗಳು.
ಮದುವೆ ಮಕ್ಕಳು ಇಲ್ಲದ ಸಲ್ಮಾನ್ ಇಷ್ಟೊಂದು ಪ್ರಮಾಣದ ಆಸ್ತಿ ಯಾರ ಪಾಲಾಗುತ್ತದೆ ಎನ್ನುವ ಪ್ರಶ್ನೆಅನೇಕರ ಮನದಲ್ಲಿ ಮೂಡುತ್ತದೆ.ಈ ಪ್ರಶ್ನೆಗೆ ಖುದ್ದು ಸಲ್ಮಾನ್ ಉತ್ತರಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಬಾಲಿವುಡ್ ಭಾಯಿಜಾನ್, ತಮ್ಮ ಆಸ್ತಿಯ ಅರ್ಧದಷ್ಟು ಭಾಗವನ್ನು ಟ್ರಸ್ಟ್‌ಗೆ ದಾನ ಮಾಡುವುದಾಗಿ ಹೇಳಿದ್ದಾರೆ. ತಾನು ಮದುವೆಯಾದರೂ, ಮದುವೆಯಾಗದಿದ್ದರೂ ಅರ್ಧದಷ್ಟು ಆಸ್ತಿ ಟ್ರಸ್ಟ್‌ಗೆ ಸೇರುವುದಾಗಿ ಹೇಳಿದ್ದಾರೆ.
ಒಂದು ವೇಳೆ ತನ್ನ ಕೊನೆ ಕಾಲದವರೆಗೆ ಮದುವೆಯಾಗದೇ ಉಳಿದರೆ 100% ಆಸ್ತಿಯನ್ನು ಟ್ರಸ್ಟ್‌ಗೆ ದಾನ ಮಾಡುವುದಾಗಿ ಹೇಳಿದ್ದಾರೆ.
ಸಲ್ಮಾನ್ ಭಾರತದಲ್ಲಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಬೀಯಿಂಗ್ ಹ್ಯೂಮನ್ ಫೌಂಡೇಶನ್ ಹೆಸರಿನ ಚಾರಿಟಿಯನ್ನು ನಡೆಸುತ್ತಿದ್ದಾರೆ.
ಈ ಮೂಲಕ ಸಲ್ಮಾನ್ ತಾನು ಸ್ಥಾಪಿಸಿದ ಟ್ರಸ್ಟ್ ತನ್ನ ಸಂಪೂರ್ಣ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುತ್ತದೆ ಎನ್ನುವ ಸುಳಿವು ನೀಡಿದ್ದಾರೆ.