ಬಿಗ್ ಬಾಸ್ ಸೀಸನ್ ಇನ್ಮುಂದೆ ಹೋಸ್ಟ್ ಮಾಡೋದು ಯಾರು ಗೊತ್ತಾ? ವೇದಿಕೆ ಮೇಲೆಯೇ ಮೀಸೆ ತಿರುವುತ್ತಾ ಗತ್ತಿನಲ್ಲಿ ಹೆಸರು ರಿವೀಲ್ ಮಾಡಿದ್ರ ಕಿಚ್ಚ ಸುದೀಪ್..!
ಬಿಗ್ ಬಾಸ್ ಕನ್ನಡ ಸೀಸನ್ 11 ಸದ್ಯ ನಡೆಯುತ್ತಿದೆ. ಇದುವೇ ನನ್ನ ಕೊನೆಯ ಸೀಸನ್ ಎಂದು ಇತ್ತೀಚೆಗೆಯಷ್ಟೇ ಕಿಚ್ಚ ಪೋಸ್ಟ್ ಶೇರ್ ಮಾಡುವ ಮೂಲಕ ಶಾಕಿಂಗ್ ನ್ಯೂಸ್ ಹಂಚಿಕೊಂಡಿದ್ದರು. ಆದರೆ ಇದೀಗ ಮುಂದಿನ ಹೋಸ್ಟ್ ಯಾರಾಗ್ತಾರೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದ್ದು, ಕಿಚ್ಚನೇ ಬಹುದೊಡ್ಡ ಹಿಂಟ್ ನೀಡಿದಂತಿದೆ.
ಅಮ್ಮನ ಅಗಲಿಕೆಯ ನೋವಲ್ಲಿದ್ದ ಕಿಚ್ಚ ಸುದೀಪ್, ಕಳೆದ ವಾರ ಕಿಚ್ಚನ ಪಂಚಾಯಿತಿ ಶೋ ನಡೆಸಿಕೊಟ್ಟಿರಲಿಲ್ಲ. ಆದರೆ ಈ ವಾರ ಮತ್ತೆ ವೇದಿಕೆ ಮೇಲೆ ಬಂದು ಪಂಚಾಯ್ತಿ ನಡೆಸಿಕೊಟ್ಟರು. ಅಷ್ಟೇ ಅಲ್ಲದೆ, ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಬೆನ್ನಲ್ಲೇ ಮೋಕ್ಷಿತಾ ಹಾಗೂ ಮಂಜು ಅವರಿಗೆ ಕೂಲ್ ಆಗಿಯೇ ಕಿವಿ ಮಾತು ಹೇಳಿದ್ದರು.
ಕೆಲ ದಿನಗಳ ಹಿಂದೆ ಮೋಕ್ಷಿತಾ ಕೇವಲ 10 ವಾರ ಇದ್ದು ಹೋಗ್ತಾರೆ ಎಂದಿದ್ದ ತ್ರಿವಿಕ್ರಮ್ ವಿರುದ್ಧ ಮೋಕ್ಷಿತಾ ಸಿಟ್ಟಾಗಿದ್ದರು. ಅದರ ಬಗ್ಗೆ ಪ್ರಶ್ನೆ ಮಾಡಿದ ಕಿಚ್ಚ, "ನಿಮ್ಮ ಕೋಪಕ್ಕೆ ಕಾರಣ ಏನು? ಮೊದಲೇ ಯಾಕೆ ಪ್ರಶ್ನೆ ಮಾಡಲಿಲ್ಲ" ಎಂದರು. ಇದಕ್ಕೆ ಉತ್ತರಿಸಿದ ಮೋಕ್ಷಿತಾ, "ಮಂಜು ಅವರು ಕೇಳೋದು ಬೇಡ ಅಂದಿದ್ರು ಅದಕ್ಕೆ ನಾನು ಕೇಳಿರಲಿಲ್ಲ" ಅಂತಾ ಹೇಳಿದ್ರು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಿಚ್ಚ, "ಮನಸ್ಸಿನ ಮಾತು ಹೇಳೋಕೆ ಅಪ್ಪಣೆ ಬೇಡ" ಎಂದು ಮೋಕ್ಷಿತಾಗೆ ಮನವರಿಕೆ ಮಾಡಿಕೊಟ್ಟರು. ಈ ವೇಳೆ ಸುದೀಪ್, "ಈ ಸೀಸನ್ ಬೇಡ ಅಂದ್ರು ಬಿಡಲಿಲ್ಲ, ಸಾಕಪ್ಪಾ ಬಿಟ್ಟುಬಿಡ್ರಪ್ಪಾ ಅಂದ್ರು ಬಿಡ್ತಿಲ್ಲ. ಮುಂದಿನ ಸೀಸನ್, ಮುಂದಿನ ಸೀಸನ್ ಅಂತ ಮಾಡಿಸಿದ್ರು. ನಾನು ಮಾಡಲ್ಲ ಅಂತಿದ್ದಂತೆ, ಬಿಗ್ ಬಾಸ್ಗೆ ಹೋಸ್ಟ್ ಆಗಿ ಅವರು ಬರ್ತಾರೆ? ಇವರು ಬರ್ತಾರೆ ಎಂದು 2-3 ಹೆಸರುಗಳು ಕೇಳಿ ಬರ್ತಾನೆ ಇವೆ. ನಾನು ಯಾರೋ ಬಂದು ನನ್ನ ವೇದಿಕೆ ಕಿತ್ತುಕೊಳ್ತಾರೆ ಎನ್ನುವ ಯೋಚನೆ ಮಾಡ್ಬೇಕಾ? ಅಥವಾ ವೇದಿಕೆ ಮೇಲೆ ನಾನು ನಿಂತ್ರೆನೇ ತೂಕ ಜಾಸ್ತಿ ಅನ್ನೋ ಕಾನ್ಫಿಡೆನ್ಸ್ನಲ್ಲಿ ನಿಲ್ಬೇಕಾ?" ಎಂದು ಹೇಳುತ್ತಾ ಕಿಚ್ಚ ಸುದೀಪ್ ಮೀಸೆ ತಿರುಗಿಸಿದ್ದರು.
ಕಿಚ್ಚನ ಈ ಮಾತು ಕೇಳಿದ ಫ್ಯಾನ್ಸ್ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದರು. ಈ ಚಪ್ಪಾಳೆಯ ಸಂಪೂರ್ಣ ಅರ್ಥ... ಸುದೀಪ್ ಇದ್ದರಷ್ಟೇ ಬಿಗ್ ಬಾಸ್ ಶೋಗೆ ಶೋಭೆ ಎಂದಂತಿತ್ತು. ಇನ್ನು ಇದೀಗ ಮುಂದಿನ ಸೀಸನ್ನಲ್ಲೂ ಸುದೀಪ್ ಅವರೇ ಹೋಸ್ಟ್ ಆಗಿ ಬರಲಿದ್ದಾರೆ, ಅವರ ಈ ಮಾತಿಗಳನ್ನು ಕೇಳಿದ್ರೆ ಮನಸ್ಸು ಬದಲಿಸಿದಂತೆ ತೋರುತ್ತಿದೆ ಎಂದು ಜನ ಮಾತನಾಡಿಕೊಳ್ತಿದ್ದಾರೆ.