ಈ ಐದು ಧಾನ್ಯಗಳು ರಕ್ತದ ಸಕ್ಕರೆಯನ್ನು ಏರಲು ಬಿಡುವುದೇ ಇಲ್ಲ! ಮಧು ಮೇಹಿಗಳಿಗೆ ಬೆಸ್ಟ್ ಆಹಾರ
ಬಾರ್ಲಿ ಗ್ಲುಟನ್ ಮುಕ್ತವಾಗಿದೆ. ಇದರ ಹಿಟ್ಟಿನಿಂದ ತಯಾರಿಸಿದ ಚಪಾತಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಓಟ್ ಮೀಲ್ ಫೈಬರ್, ಮೆಗ್ನೀಸಿಯಮ್ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ. ಓಟ್ ಮೀಲ್ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ.
ಬಾರ್ಲಿ ಮತ್ತು ಓಟ್ ಮೀಲ್ ನಂತೆ ಹರಿವೆ ಬೀಜ ಕೂಡಾ ಅನೇಕ ಆರೋಗ್ಯಕರ ಗುಣಗಳ ಉಗ್ರಾಣ. ಇದರಲ್ಲಿ ಪ್ರೋಟೀನ್ ಪ್ರಮಾಣವು ಬಹಳ ಹೆಚ್ಚಾಗಿರುತ್ತದೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ.
ರಾಗಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುತ್ತದೆ. ಮಾತ್ರವಲ್ಲ ಇದು ಇತರ ಪೌಷ್ಟಿಕ ಗುಣಗಳ ಉಗ್ರಾಣವಾಗಿದೆ. ರಾಗಿಯು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ, ಕೊಲೆಸ್ಟ್ರಾಲ್ ಮಟ್ಟವನ್ನು ಕೂಡಾ ನಿಯಂತ್ರಿಸುತ್ತದೆ.
ಬಾಜ್ರದಲ್ಲಿರುವ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ಅಷ್ಟೇ ಅಲ್ಲ, ಇದು ಮಲಬದ್ಧತೆ ಸಮಸ್ಯೆಯಿಂದ ಕೂಡಾ ಪರಿಹಾರವನ್ನು ನೀಡುತ್ತದೆ. ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)