ವರ್ಷದಲ್ಲಿ ಮೂರು ತಿಂಗಳು ಕತ್ತಲಲ್ಲಿಯೇ ತುಂಬಿತ್ತು ನಗರ, ಪರಿಹಾರಕ್ಕಾಗಿ ಸೂರ್ಯನನ್ನೇ ಸೃಷ್ಟಿಸಿದ ಜನ

Thu, 26 Aug 2021-8:47 pm,

ಡೈಲಿ ಸ್ಟಾರ್ ನ್ಯೂಸ್ ಪ್ರಕಾರ, ಇಟಲಿಯ ಉತ್ತರ ಪ್ರದೇಶದ ವಿಗನೆಲ್ಲಾ ಗ್ರಾಮವು ಎಲ್ಲಾ ಕಡೆಗಳಲ್ಲಿ ಪರ್ವತಗಳು ಮತ್ತು ಕಣಿವೆಗಳಿಂದ ಆವೃತವಾಗಿದೆ. ಚಳಿ ಇದ್ದಾಗಲೆಲ್ಲಾ, ಸೂರ್ಯನ ಕಿರಣಗಳು ಇಲ್ಲಿಗೆ ಬೀಳುವುದೇ ಇಲ್ಲ. ಈ ಕಾರಣದಿಂದಾಗಿ ನವೆಂಬರ್ ನಿಂದ ಫೆಬ್ರವರಿ ವರೆಗೆ ಸುಮಾರು ಮೂರು ಇಡೀ ನಗರವೇ ತಿಂಗಳು ಕತ್ತಲೆಯಾಗಿರುತ್ತದೆ. (ಚಿತ್ರ ಕೃಪೆ: ರಾಯಿಟರ್ಸ್)  

ಈ ಸಮಯದಲ್ಲಿ, ಸೂರ್ಯನ ಕಿರಣಗಳು ಗ್ರಾಮವನ್ನು ತಲುಪದಿದ್ದ ಕಾರಣ, ಜನರು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದರು. ಸೂರ್ಯನ ಬೆಳಕಿನ ಕೊರತೆಯಿಂದಾಗಿ, ಹಳ್ಳಿಯ ಜನರು ನಿದ್ರಾಹೀನತೆ, ಎನರ್ಜಿ ಲೆವೆಲ್ ಕಡಿಮೆಯಾಗುವುದು,  ಅಪರಾಧ ದರದಲ್ಲಿ ಹೆಚ್ಚಳ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು. (ಫೋಟೊ ಕೃಪೆ: ಟ್ರೆಂಡ್ ಸ್ಟೆಗರ್ಡ್/ಗೌಸ್ಟಾಟೊಪೆನ್ ಬುಕಿಂಗ್)

  

ಈ ನಿಟ್ಟಿನಲ್ಲಿ, ಟಿಕ್‌ಟಾಕ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಡಾಕ್ಟರ್ ಕರಣ್ ರಾಜ್ ಒಂದು ಗ್ರಾಮವು ಸೂರ್ಯನ ಬೆಳಕು ಇಲ್ಲದೆ ಎಲ್ಲಾ ಸಮಸ್ಯೆಗಳೊಂದಿಗೆ ಹೇಗೆ ಹೋರಾಡುತ್ತಿತ್ತು ಎಂದು ಹೇಳಿದ್ದಾರೆ. ಇದನ್ನು ತಪ್ಪಿಸಲು, ಹಳ್ಳಿಯ ಜನರು ತಮ್ಮದೇ ಆದ ಸೂರ್ಯನನ್ನು ಸೃಷ್ಟಿ ಮಾಡಿದ್ದಾರೆ. 

ವಿಗೆನೆಲ್ಲಾ ಗ್ರಾಮವು 2006 ರಲ್ಲಿ 100,000 ಯುರೋಗಳಷ್ಟು ವೆಚ್ಚದಲ್ಲಿ 8 ಮೀಟರ್ ಉದ್ದ ಮತ್ತು 5 ಮೀಟರ್ ಅಗಲದ ಘನ ಉಕ್ಕಿನ ಹಾಳೆಗಳನ್ನು ನಿರ್ಮಿಸಿತು. ಇದನ್ನು ಮಾಡಿದ ನಂತರ ಸೂರ್ಯನ ಬೆಳಕು ನೇರವಾಗಿ ಈ ಉಕ್ಕಿನ ಹಾಳೆಯನ್ನು ತಲುಪಿ, ಈ ಮೂಲಕ ಗ್ರಾಮಕ್ಕೂ ಬೆಳಕನ್ನು ಬೀಳುತ್ತಿದೆ. (ಚಿತ್ರ ಕೃಪೆ: ರಾಯಿಟರ್ಸ್)

ಈ ಒಂದು ಕಲ್ಪನೆಯು ಹಳ್ಳಿಯ ಜನರಿಗೆ ಉತ್ತಮ ಯಶಸ್ಸನ್ನು ತಂದುಕೊಟ್ಟಿತು. ಈ ಗ್ರಾಮವು ಈಗ ದಿನಕ್ಕೆ ಆರು ಗಂಟೆಗಳಷ್ಟು ಕಾಲ ಬೆಳಕು ಪಡೆಯುತ್ತದೆ.  (ಚಿತ್ರ ಕೃಪೆ: ರಾಯಿಟರ್ಸ್)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link