ಭಾರತದ ಕರೆನ್ಸಿ ನೋಟುಗಳಲ್ಲಿ ಮಹಾತ್ಮ ಗಾಂಧಿಯವರಿಗಿಂತ ಮೊದಲು ಇದ್ದದ್ದು ಯಾರ ಫೋಟೋ ? ಇತಿಹಾಸದಲ್ಲಿ ಅಡಗಿರುವ ರಹಸ್ಯ ಇದು !
US ನೋಟುಗಳು ಅನೇಕ ಅಧ್ಯಕ್ಷರು ಮತ್ತು ಇತರ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಒಳಗೊಂಡಿರುತ್ತವೆ. UK ನೋಟುಗಳು ರಾಜ ಅಥವಾ ರಾಣಿಯ ಫೋಟೋವ ನ್ನು ಹೊಂದಿರುತ್ತದೆ. ಭಾರತದ ಪ್ರತಿಯೊಂದು ನೋಟಿನ ಮೇಲೆ ಮಹಾತ್ಮ ಗಾಂಧಿಯವರ ಫೋಟೋ ಇದೆ.
ಮಹಾತ್ಮಾ ಗಾಂಧಿಯವರ ಅವರ 100 ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ 1969ರಲ್ಲಿ ಭಾರತೀಯ ಕರೆನ್ಸಿ ನೋಟುಗಳಲ್ಲಿ ಅವರ ಫೋಟೋವನ್ನು ಮುದ್ರಿಸಲಾಯಿತು. ಇದು ಗಾಂಧೀಜಿ ಸೇವಾಗ್ರಾಮ ಆಶ್ರಮದ ಮುಂದೆ ಕುಳಿತಿದ್ದ ಫೋಟೋ ಆಗಿತ್ತು.
ಮಹಾತ್ಮ ಗಾಂಧೀಜಿಯವರ ನಗುತ್ತಿರುವ ಮುಖವನ್ನು ಮೊದಲು 1987 ರಲ್ಲಿ ಭಾರತೀಯ ನೋಟಿನಲ್ಲಿ ಮುದ್ರಿಸಲಾಯಿತು.ಅದೇ ವರ್ಷ ಅಕ್ಟೋಬರ್‌ನಲ್ಲಿ ಗಾಂಧೀಜಿಯವರ ನಗುಮುಖದ 500 ರೂಪಾಯಿ ನೋಟು ಬಿಡುಗಡೆಯಾಯಿತು. ಅಂದಿನಿಂದ, ಪ್ರತಿ ಭಾರತೀಯ ನೋಟಿನ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವನ್ನು ಮುದ್ರಿಸಲಾಗಿದೆ.
ರೂಪಾಯಿ ನೋಟನ್ನು ಬಿಡುಗಡೆ ಮಾಡಿತು. ಅದರಲ್ಲಿ ಕಿಂಗ್ ಜಾರ್ಜ್ VI ರ ಫೋಟೋವನ್ನು ಸಾರನಾಥದ ಅಶೋಕ ಸ್ತಂಭದೊಂದಿಗೆ ಬದಲಾಯಿಸಲಾಯಿತು. 1950 ರ ದಶಕದಲ್ಲಿ, ಏಷ್ಯಾಟಿಕ್ ಸಿಂಹ, ಸಾಂಬಾರ್ ಜಿಂಕೆ ಮತ್ತು ಕೃಷಿ ಚಿತ್ರಗಳಂತಹ ವಿವಿಧ ಚಿಹ್ನೆಗಳು ಮತ್ತು ವಿನ್ಯಾಸಗಳನ್ನು ಭಾರತೀಯ ನೋಟುಗಳಲ್ಲಿ ಬಳಸಲಾಯಿತು.
1980 ರ ದಶಕದಲ್ಲಿ, ನೋಟುಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯನ್ನು ಬಿಂಬಿಸುವ ಚಿತ್ರಗಳನ್ನು ಒಳಗೊಂಡಿತ್ತು. 2 ರೂಪಾಯಿ ನೋಟಿನಲ್ಲಿ ಆರ್ಯಭಟ ಉಪಗ್ರಹ ಮತ್ತು 5 ರೂ. ನೋಟಿನಲ್ಲಿ ಕೃಷಿ ಯಾಂತ್ರೀಕರಣದ ಫೋಟೋ ಹೀಗೆ.
1990 ರ ದಶಕದಲ್ಲಿ, ಭದ್ರತೆಯನ್ನು ಹೆಚ್ಚಿಸಲು ಆರ್‌ಬಿಐ ನೋಟುಗಳ ಮೇಲೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಶಾಶ್ವತವಾಗಿ ಸೇರಿಸಲು ನಿರ್ಧರಿಸಿತು. 1996ರಲ್ಲಿ, ಹೊಸ ಮಹಾತ್ಮಾ ಗಾಂಧಿ ಸೀರೀಸ್ ಕರೆನ್ಸಿಯನ್ನು ಪರಿಚಯಿಸಲಾಯಿತು. ಇದು ಅವರ ಫೋಟೋ ಮತ್ತು ಇತರ ಭದ್ರತಾ ವೈಶಿಷ್ಟ್ಯಗಳನ್ನು ಒಳಗೊಂಡಿತ್ತು.