50 ವರ್ಷ ವಯಸ್ಸಾದ್ರೂ ನಟಿ ಸಿತಾರಾ ಮದುವೆಯಾಗದಿರಲು ಕಾರಣ ಇವರಿಬ್ಬರು..! ಸ್ವತಃ ನಟಿಯೇ ಬಿಚ್ಚಿಟ್ಟ ಸತ್ಯ
ಸುಮಾರು 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದಿರುವ ನಟಿ ಸಿತಾರ 50 ವರ್ಷ ವಯಸ್ಸಾದರೂ ಇನ್ನೂ ಮದುವೆಯಾಗಿಲ್ಲ. ಈ ಗಟ್ಟಿ ನಿರ್ಧಾರ ಹಿಂದೆ ನೋವಿನ ಸಂಗತಿ ಇದೆ ಎಂಬುದು ನಿಮಗೆ ತಿಳಿದಿದೆಯೇ?
ಬಹುಭಾಷಾ ನಟಿ ಸಿತಾರಾ ಮೂಲತಃ ಕೇರಳದವರು. 90ರ ದಶಕದಲ್ಲಿ ಸಿನಿಮಾರಂಗದಲ್ಲಿ ಅಗ್ರಸ್ಥಾನದಲ್ಲಿದ್ದ ಓರ್ವ ನಟನನ್ನು ನಟಿ ಪ್ರೀತಿಸಿದ್ದರು. ಆದರೆ ಅವರು ಅಂದುಕೊಂಡಂತೆ ಮದುವೆಯಾಗಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಅವರು ಮುಂದೆ ಮದುವೆಯಾಗಬಾರದು ಎಂಬ ನಿರ್ಧರಿಸಿದರು ಎಂದು ಹೇಳಲಾಗುತ್ತದೆ.
ಅಂದಹಾಗೆ ಈ ವಿಚಾರದ ಬಗ್ಗೆ ಅನೇಕ ಟಿವಿ ಕಾರ್ಯಕ್ರಮಗಳಲ್ಲಿ, ಅವರು ಮಾತನಾಡಿದ್ದಾರೆ. ಆದರೆ ಒಂಟಿ ಜೀವನದ ಬಗ್ಗೆ ಅವರು ಮಾತನಾಡಿದ್ದರೂ ಸಹ ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಹೇಳಿಲ್ಲ.
ಸಿತಾರಾ ಅವರ ಪೋಷಕರು ವಿದ್ಯುತ್ ಮಂಡಳಿಯಲ್ಲಿ ಅಧಿಕಾರಿಗಳಾಗಿದ್ದರು. ತಂದೆ-ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದ ಸಿತಾರ, ಹೆತ್ತವರನ್ನು ಬಿಟ್ಟು ಅವರಿಂದ ದೂರ ಉಳಿಯಲು ಸಾಧ್ಯವಾಗದೆ, ಮದುವೆಯೇ ಬೇಡ ಎಂದು ನಿರ್ಧರಿಸಿದ್ದರಂತೆ. ಆದರೆ, ತಂದೆಯ ಮರಣದ ನಂತರ ಮದುವೆ ಎಂಬ ವಿಷಯವೇ ಅವರ ಜೀವನದಿಂದ ಮರೆಯಾಯಿತು ಎಂದು ಹೇಳುತ್ತಾರೆ ನಟಿ.
“ಆದರೆ ಈ ಜೀವನ ನನಗೆ ಸಂತೋಷ ನೀಡುತ್ತಿದೆ. ನನ್ನನ್ನು ನಾನು ತೊಡಗಿಸಿಕೊಳ್ಳಲು ಸಾಕಷ್ಟು ಕೆಲಸಗಳು ಇವೆ” ಎಂದು ಹೇಳಿದ್ದಾರೆ.