ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹುಡುಗಿಯರು ಏಕೆ ಸಿಗುತ್ತಿಲ್ಲ? ನಿಜವಾದ ಕಾರಣ ಇಲ್ಲಿದೆ ನೋಡಿ!!
ಇಂದು ಹೆಚ್ಚಿನ ಹುಡುಗಿಯರು ಇಂಜಿನಿಯರಿಂಗ್, ವೈದ್ಯಕೀಯ, IAS, IPS ಆಗುವ ಕನಸು ಹೊಂದಿರುತ್ತಾರೆ. ಸರ್ಕಾರಿ ಮತ್ತು ಖಾಸಗಿ ಕಂಪನಿಗಳಲ್ಲಿ ಕೈತುಂಬಾ ಸಂಬಳ ಬರುವ ಉದ್ಯೋಗವನ್ನು ಹೊಂದಿರುತ್ತಾರೆ. ಇಂದು ಕಾಲೇಜುಗಳಲ್ಲಿ ಹುಡುಗಿಯರ ಸಂಖ್ಯೆ ಹುಡುಗರಿಗಿಂತಲೂ ಹೆಚ್ಚಿದೆ.
ಹೆಚ್ಚಿನ ಹುಡುಗರು ತಮ್ಮ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ ಅಥವಾ ಪಾಸಾಗದೆ ಬಿಡುತ್ತಾರೆ. ಕೆಲವರು ವ್ಯಸನಗಳಿಗೆ ಬಿದ್ದು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.
ಇಂದಿನ ಹುಡುಗಿಯರು ತಮ್ಮ ವಿದ್ಯಾಭ್ಯಾಸದ ನಂತರ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ. ತಮ್ಮದೇ ಆದ ಹಲವಾರು ಕನಸುಗಳನ್ನು ಹೊಂದಿದ್ದಾರೆ.
ಹಿಂದಿನ ಕಾಲದಂತೆ ಹುಡುಗ ಸಿಕ್ಕರೆ ಮದುವೆಯಾಗುವ ಪರಿಸ್ಥಿತಿ ಇಂದು ಇಲ್ಲ. ಪೋಷಕರು ತಮ್ಮ ಮಗಳು ಉತ್ತಮ ಕುಟುಂಬಕ್ಕೆ ಸೇರಬೇಕು ಎಂದು ಬಯಸುವುದು ತಪ್ಪಲ್ಲ.
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹುಡುಗಿಯರ ವರ್ತನೆ, ಉಡುಗೆ ಇತ್ಯಾದಿಗಳನ್ನು ನೋಡಿ ಸಮಾಜದ ದಾರಿ ತಪ್ಪಿದಂತಿದೆ.
ಮದುವೆಯ ವಿಷಯದಲ್ಲಿ ಹುಡುಗ ಅಥವಾ ಹುಡುಗಿ ಯಾರಿಗೂ ತಕ್ಷಣವೇ ನಂಬಿಕೆ ಇಡುವ ಸ್ಥಿತಿಯಲ್ಲಿಲ್ಲ. ಇಬ್ಬರಲ್ಲಿಯೂ ಆತ್ಮವಿಶ್ವಾಸದ ಕೊರೆತೆ ಇರುತ್ತದೆ.
ಇಂದಿನ ಮನೆಗಳಲ್ಲಿ ಅಶಿಕ್ಷಿತ ಹುಡುಗರನ್ನು ಹುಡುಕುವುದು ಕಷ್ಟ, ಆದರೆ ಹುಡುಗಿಯರನ್ನು ಹುಡುಕುವುದು ಇನ್ನೂ ಕಷ್ಟವಾಗಿದೆ. ಡಿಮ್ಯಾಂಡ್‌ಗಳು ಜಾಸ್ತಿ ಇರುವ ಕಾರಣ ಮದುವೆಗಳು ತಡವಾಗುತ್ತಿದೆ.
ಹುಡುಗ ಮತ್ತು ಹುಡುಗಿ ಇಬ್ಬರೂ ಸಮಾನವಾಗಿ ಶಿಕ್ಷಣ ಹೊಂದಬೇಕು ಮತ್ತು ಪರಸ್ಪರ ಸಮರಸತೆ ಹೊಂದಬೇಕು. ಈ ಕಾರಣಗಳಿಂದ ಮದುವೆಯಾಗಲು ಹುಡುಗಿಯರು ಸಿಗದಿರುವ ಪರಿಸ್ಥಿತಿ ಉಂಟಾಗಿದೆ.
ಇಂದು ಬಹುತೇಕ ಪೋಷಕರು ಹುಡುಗರ ಗುಣ ನೋಡುತ್ತಿಲ್ಲ. ಅದರ ಬದಲು ಅವರು ಹಣ, ಆಸ್ತಿ-ಸಂಪತ್ತು ನೋಡುತ್ತಾರೆ. ಹುಡುಗ ಸರ್ಕಾರಿ ಕೆಲಸದಲ್ಲಿರಬೇಕು, ದೊಡ್ಡ ಮನೆ ಹೊಂದಿರಬೇಕು, ಜಮೀನು ಹೊಂದಿರಬೇಕು, ಸೈಟ್ ಸೇರಿದಂತೆ ಸ್ವಂತ ಆಸ್ತಿ ಹೊಂದಿರಬೇಕೆಂದು ಬಯಸುತ್ತಾರೆ.